ಪೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿಯ ಸಮಾರೋಪ ಸಮಾರಂಭ
ಚಿತ್ರದುರ್ಗ : ರುಡ್‌ಸೆಟ್ ಸಂಸ್ಥೆಯು ಉದ್ಯಮಶೀಲತಾಭಿವೃದ್ಧಿ (ಇ.ಡಿ.ಪಿ.) – ಪೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿ ಕಾರ್ಯಕ್ರಮವನ್ನು ದಿನಾಂಕ: 28.06.2023 ರಿಂದ 27.07.2023 ರವರೆಗೆ 30 ದಿನಗಳ ಕಾಲ ಆಯೋಜಿಸಲಾಗಿದ್ದು, ಈ ತರಬೇತಿ ಕಾರ್ಯಗಾರದ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ದಿ: 27.07.2023 ರ ಸಂಜೆ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿತ್ತು, ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಯತ ಎಸ್.ಎನ್.ಬಸವರಾಜ, ನಿವೃತ್ತ ನಿರ್ದೇಶಕರು, ರುಡ್‌ಸೆಟ್‌ಸಂಸ್ಥೆ, ಚಿತ್ರದುರ್ಗ ಇವರು ಭಾಗವಹಿಸಿದ್ದರು.
ಇವರು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು ಹಾಗೂ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಆಧುನಿಕತೆಯ ಹೆಸರಿನಲ್ಲಿ ಬಹಳ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಜಗತ್ತಿನಲ್ಲಿ ಪೋಟೋಗ್ರಫಿ ಮತ್ತು ವಿಡಿಯೋಗ್ರಫಿ ಕ್ಷೇತ್ರವು ವಿಪುಲವಾದ ಉದ್ಯೋಗದ ಅವಕಾಶಗಳನ್ನು ಸೃಷ್ಠಿ ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟರು. ಪ್ರಸ್ತುತ ಪೋಟೋಗ್ರಫಿ ಮತ್ತು ವಿಡಿಯೋಗ್ರಫಿ ವೃತ್ತಿಯಲ್ಲಿ ನೈಪುಣೈಯುಳ್ಳ/ ಕೌಶಲ್ಯವುಳ್ಳವರಿಗೆ ಹೆಚ್ಚು ಬೇಡಿಕೆ ಇದೆ, ಆಗಾಗಿ ವೃತ್ತಿ ಬದುಕಿನಲ್ಲಿ ನೈಪುಣ್ಯತೆಯೊಂದಿಗೆ ಬದಲಾಗುತ್ತಿರುವ ತಾಂತ್ರಿಕತೆಯ ಅರಿವನ್ನು ಬೆಳೆಸಿಕೊಳ್ಳಿ ಎಂದು ಕಿವಿಮಾತು ಹೇಳಿದರು. ಮುಂದಿನ ದಿನಗಳಲ್ಲಿ ಉದ್ಯಮವನ್ನು ನಡೆಸುವಾಗ ವ್ಯವಹಾರದಲ್ಲಿ ಏಳು-ಬೀಳುಗಳು ಕಾಣುವುದು ಸಹಜ, ಆದರೆ ಉದ್ಯಮಕ್ಕೆ ತೊಡಗಿಸಿರುವ ಮೂಲಬಂಡವಾಳಕ್ಕೆ ದಕ್ಕೆ ಬಾರದಂತೆ ಜಾಗ್ರತೆವಹಿಬೇಕು, ಲಾಭ/ ನಷ್ಟಗಳ ಬಗ್ಗೆ ಯೋಚಿಸಬೇಕು, ವ್ಯವಸ್ಥಿತವಾದ ಯೋಜನೆಯನ್ನು ರೂಪಿಸಿಕೊಂಡು ಸಾಮರ್ಥ್ಯಕ್ಕೆ ತಕ್ಕ ಕೆಲಸದ ಒಪ್ಪಂದಗಳನ್ನು ಮಾಡಿಕೊಳ್ಳಿರಿ ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.
ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ರಾಧಮ್ಮ ಹೆಚ್.ಆರ್. ರವರು ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿ ಶಿಬಿರಾರ್ಥಿಗಳಿಗೆ ನೀವು ಪಡೆದ ತರಬೇತಿಯನ್ನು ಸದುಪಯೋಗ ಪಡೆಸಿಕೊಂಡು ಸ್ವ ಉದ್ಯೋಗಿಗಳಾಗಿ ಹಾಗೂ ಉತ್ತಮ ಜೀವನ ನಡೆಸುವಂತೆ ಶುಭ ಹಾರೈಸಿದರು. ನಿಮ್ಮ ಗ್ರಾಮದಲ್ಲಿರುವ ಇತರ ನಿರುದ್ಯೋಗಿ ಯುವಕ ಯುವತಿಯರಿಗೆ ಸಂಸ್ಥೆಯ ಬಗ್ಗೆ ತಿಳಿಸಿ ಹಾಗೂ ಅವರಿಗೂ ತರಬೆತಿ ಪಡೆದು ಸ್ವ ಉದ್ಯೋಗ ಮಾಡುವ ಅವಕಾಶ ಕಲ್ಪಸಲು ಪ್ರಯತ್ನಿಸಿ ಎಂದು ತಿಳಿಸಿದರು.
ಸಂಸ್ಥೆಯ ಉಪನ್ಯಾಸಕರಾದ ಶ್ರೀ ತೋಟಪ್ಪ ಎಸ್. ಗಾಣಿಗೇರ ರವರು ಕಾರ್ಯಕ್ರಮ ನಿರೂಪಿಸಿದರು ಮತ್ತು ಕೊನೆಯಲ್ಲಿ ವಂದನಾರ್ಪಣೆ ಮಾಡಿದರು.
ಒಟ್ಟು ಕಾರ್ಯಕ್ರಮದಲ್ಲಿ 25 ಜನ ಶಿಬಿರಾರ್ಥಿಗಳು ಸೇರಿದಂತೆ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.