ಲಘು ವಾಹನ ಚಾಲನಾ ತರಬೇತಿ ಸಮಾರೋಪ ಸಮಾರಂಭ ಕಾರ್ಯಕ್ರಮ
ಚಿತ್ರದುರ್ಗ : ರುಡ್‌ಸೆಟ್ ಸಂಸ್ಥೆಯು ಜಿಲ್ಲಾ ಪಂಚಾಯತ,ಚಿತ್ರದುರ್ಗ ಇವರ ಪ್ರಾಯೋಜಿಕತ್ವದಲ್ಲಿ ಎನ್‌ಆರ್‌ಎಲ್‌ಎಂ ಯೋಜನೆ ಯಡಿಯಲ್ಲಿ ಗ್ರಾಮೀಣ ಮಹಿಳೆಯರಿಗೆ ಉದ್ಯಮಶೀಲತಾಭಿವೃದ್ಧಿ (ಇ.ಡಿ.ಪಿ.) – ಲಘು ವಾಹನ ಚಾಲನಾ ತರಬೇತಿ ಕಾರ್ಯಕ್ರಮವನ್ನು ದಿನಾಂಕ: ೧೩.೧೨.೨೦೨೩ ರಿಂದ ೧೧.೦೧.೨೦೨೪ ರವರೆಗೆ ೩೦ ದಿನಗಳ ಕಾಲ ಆಯೋಜಿಸಲಾಗಿದ್ದು, ಈ ತರಬೇತಿ ಕಾರ್ಯಗಾರದ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ದಿ: ೧೧.೦೧.೨೦೨೪ ರ ಸಂಜೆ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿತ್ತು, ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಯತ ಡಾ. ರಂಗಸ್ವಾಮಿ, ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯತ, ಚಿತ್ರದುರ್ಗ ಇವರು ಭಾಗವಹಿಸಿದ್ದರು.
ಇವರು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು ಹಾಗೂ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ “ಮನಸ್ಸಿದರೆ ಮಾರ್ಗ”ಎನ್ನುವಂತೆ ಯಾವುದೇ ಕೆಲಸವನ್ನು ಆಸಕ್ತಿ ಮತ್ತು ಶ್ರದ್ಧೆಯಿಂದ ಮಾಡಿದರೆ ಉದ್ಯೋಗದಲ್ಲಿ ಯಶಸ್ಸನ್ನು ಪಡೆಯಬಹುದು. ಈ ಚಾಲನಾ ವೃತ್ತಿಯು ಮಹತ್ವಪೂರ್ಣವಾದದ್ದು. ಈ ವೃತ್ತಿಯಲ್ಲಿ ಯಾವುದೇ ತಪ್ಪನ್ನು ಎಸಗಿದರು ಅಪಾಯಕಾರಿ, ಆದ್ದರಿಂದ ಜಾಗರುಕತೆಯಿಂದ ಚಾಲನೆಯನ್ನು ಮಾಡಿ. ರಸ್ತೆ ನಿಯಮಗಳನ್ನು ಸಾರಿಗೆ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸಿರಿ. ಗ್ರಾಮೀಣ ಮಹಿಳೆಯರ ಸ್ವಾವಲಂಬನೆ ಬದುಕು ಸಾಧಿಸಲು ಸರ್ಕಾರಗಳು ಅನೇಕ ಕಾರ್ಯಕ್ರಮಗಳನ್ನು ಜಾರಿಗೊಲಿಸಿದೆ. ಅದರ ಬಾಗವಾಗಿ ಘನ ತ್ಯಾಜ್ಯವಸ್ತುಗಳ ಸಂಗ್ರಹ ಮತ್ತು ವಿಲೇವಾರಿಯ ನಿರ್ವಹಣೆ ಮತ್ತು ಜವಾಬ್ದಾರಿಯನ್ನು ಪ್ರತಿ ಗ್ರಾಮ ಪಂಚಾಯತಿಯಲ್ಲಿ ಮಹಿಳಾ ಒಕ್ಕೂಟಗಳಿಗೆ ನೀಡಲಾಗುತ್ತದೆ ಎಂದು ತಿಳಿಸುತ್ತಾ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಶ್ರೀಯುತ ರಮೇಶ ನಾಯ್ಕ್, ಕಾರ್ಯಕ್ರಮ ವ್ಯವಸ್ಥಾಪಕರು,ಎನ್‌ಆರ್‌ಎಲ್‌ಎಂ, ಚಿತ್ರದುರ್ಗ ಮತ್ತು ಅತಿಥಿ ಉಪನ್ಯಾಸಕರಾದ ಶ್ರೀಯುತ ಮಹಮ್ಮದ ತಾಜ್‌ಬಾ಼ಷಾ, ಚಿತ್ರದುರ್ಗ ಇವರು ಉಪಸ್ಥಿತರಿದ್ದರು.
ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ರಾಧಮ್ಮ ಹೆಚ್.ಆರ್. ರವರು ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿ ಶಿಬಿರಾರ್ಥಿಗಳಿಗೆ ನೀವು ಪಡೆದ ತರಬೇತಿಯನ್ನು ಸದುಪಯೋಗ ಪಡೆಸಿಕೊಂಡು ಸ್ವ ಉದ್ಯೋಗಿಗಳಾಗಿ ಹಾಗೂ ಉತ್ತಮ ಜೀವನ ನಡೆಸುವಂತೆ ಶುಭ ಹಾರೈಸಿದರು. ನಿಮ್ಮ ಗ್ರಾಮದಲ್ಲಿರುವ ಇತರ ನಿರುದ್ಯೋಗಿ ಯುವಕ ಯುವತಿಯರಿಗೆ ಸಂಸ್ಥೆಯ ಬಗ್ಗೆ ತಿಳಿಸಿ ಹಾಗೂ ಅವರಿಗೂ ತgಬೇತಿ ಪಡೆದು ಸ್ವ ಉದ್ಯೋಗ ಮಾಡುವ ಅವಕಾಶ ಕಲ್ಪಸಲು ಸಹಕರಿಸಿ ಎಂದು ತಿಳಿಸಿದರು.
ಸಂಸ್ಥೆಯ ಉಪನ್ಯಾಸಕರಾದ ಶ್ರೀ ತೋಟಪ್ಪ ಎಸ್. ಗಾಣಿಗೇರ ರವರು ಕಾರ್ಯಕ್ರಮ ನಿರೂಪಿಸಿದರು ಮತ್ತು ಕೊನೆಯಲ್ಲಿ ವಂದನಾರ್ಪಣೆ ಮಾಡಿದರು.
ಒಟ್ಟು ಕಾರ್ಯಕ್ರಮದಲ್ಲಿ ೨೨ ಜನ ಶಿಬಿರಾರ್ಥಿಗಳು ಸೇರಿದಂತೆ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.