ನೇರ ಸಂದರ್ಶನ ರುಡ್‌ಸೆಟ್ ಸಂಸ್ಥೆ, ಮೊಬೈಲ್ ರಿಪೇರಿ ತರಬೇತಿ 30 ದಿನಗಳು ಸಂದರ್ಶನ ದಿನಾಂಕ 18.03.2024 ರಂದು
ನೇರ ಸಂದರ್ಶನ
ರುಡ್‌ಸೆಟ್ ಸಂಸ್ಥೆ, ಚಿತ್ರದುರ್ಗದಲ್ಲಿ ನಿರುದ್ಯೋಗಿ ಯುವಕರಿಗಾಗಿ ಸ್ವ ಉದ್ಯೋಗ ಮಾಡಲು 30 ದಿನಗಳ ಮೊಬೈಲ್ ರಿಪೇರಿ ತರಬೇತಿಯನ್ನು ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಆಯೋಜಿಸಲಾಗಿದೆ.
• ಮೊಬೈಲ್ ರಿಪೇರಿ – 30 ದಿನಗಳು
(ಸಂದರ್ಶನ ದಿನಾಂಕ 18.03.2024 ರಂದು, ಸ್ಥಳ: ರುಡ್‌ಸೆಟ್ ಸಂಸ್ಥೆಯ ಆವರಣ, ಚಿತ್ರದುರ್ಗ)
ಅಭ್ಯರ್ಥಿಗಳ ಅರ್ಹತೆ :
19 ರಿಂದ 45 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು.
ಕನ್ನಡ ಓದು ಬರಹ ಬಲ್ಲವರಾಗಿರಬೇಕು.
ಮೊಬೈಲ್ ರಿಪೇರಿ ವೃತ್ತಿಯನ್ನು ಮಾಡಬೇಕೆಂಬ ಆಸಕ್ತಿ ಹೊಂದಿರಬೇಕು.
ಈ ತರಬೇತಿಗೆ ಸಂಬಂದಪಟ್ಟ ಕೌಶಲ್ಯ ಕುರಿತು ಪ್ರಾಥಮಿಕ ಜ್ಞಾನ ಹೊಂದಿದವರಿಗೆ ಆದ್ಯತೆ ನೀಡಲಾಗುವುದು.
ತರಬೇತಿಯು ಊಟ ಮತ್ತು ವಸತಿ ಸಹಿತವಾಗಿ ಸಂಪೂರ್ಣ ಉಚಿತವಾಗಿರುತ್ತದೆ.
ಆಸಕ್ತ ಅಭ್ಯರ್ಥಿಗಳು ತಮ್ಮ ಫೋನ್/ಮೊಬೈಲ್ ನಂಬರ್‌ವುಳ್ಳ ಸ್ವವಿಳಾಸದ ಅರ್ಜಿಯೊಂದಿಗೆ ದಿನಾಂಕ 18.03.2024 ರಂದು ಚಿತ್ರದುರ್ಗ ರುಡ್‌ಸೆಟ್ ಸಂಸ್ಥೆಯ ಕಛೇರಿಯಲ್ಲಿ ನೇರ ಸಂದರ್ಶನದಲ್ಲಿ ಭಾಗವಹಿಸಲು ಈ ಮೂಲಕ ತಿಳಿಸಲಾಗಿದೆ.
ತರಬೇತಿಗೆ ಆಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ನೇರ ಸಂದರ್ಶನದ ಮೂಲಕ ನಡೆಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8618282445, 9449732805 9481778047/ 08194- 223505