ನೇರ ಸಂದರ್ಶನ ವಿಜಯವಾಣಿ ದಿನಪತ್ರಿಕೆ ಪ್ರಕಟಣೆ 17.05.2024
ರುಡ್‌ಸೆಟ್ ಸಂಸ್ಥೆ, ಚಿತ್ರದುರ್ಗದಲ್ಲಿ ನಿರುದ್ಯೋಗಿ ಯುವತಿಯರಿಗಾಗಿ ಸ್ವ ಉದ್ಯೋಗ ಮಾಡಲು 30 ದಿನಗಳ ಮಹಿಳೆಯರಿಗೆ ಬ್ಯೂಟಿ ಪಾರ್ಲರ್ ತರಬೇತಿ & ಮಹಿಳೆಯರ ಟೈಲರಿಂಗ್ ತರಬೇತಿ ತರಬೇತಿಯನ್ನು ಜೂನ್ ತಿಂಗಳ ಮೊದಲ ವಾರದಲ್ಲಿ ಆಯೋಜಿಸಲಾಗಿದೆ.
ಮಹಿಳೆಯರಿಗೆ ಬ್ಯೂಟಿ ಪಾರ್ಲರ್ ತರಬೇತಿ & ಮಹಿಳೆಯರ ಟೈಲರಿಂಗ್ ತರಬೇತಿ – 30 ದಿನಗಳು*
(ಸಂದರ್ಶನ ದಿನಾಂಕ 27.05.2024 ರಂದು, ಸ್ಥಳ: ರುಡ್‌ಸೆಟ್ ಸಂಸ್ಥೆಯ ಆವರಣ, ಚಿತ್ರದುರ್ಗ)
ಅಭ್ಯರ್ಥಿಗಳ ಅರ್ಹತೆ :
19 ರಿಂದ 45 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು.
ಕನ್ನಡ ಓದು ಬರಹ ಬಲ್ಲವರಾಗಿರಬೇಕು.
ಈ ತರಬೇತಿಗೆ ಸಂಬಂದಪಟ್ಟ ಕೌಶಲ್ಯ ಕುರಿತು ಪ್ರಾಥಮಿಕ ಜ್ಞಾನ ಹೊಂದಿದವರಿಗೆ ಆದ್ಯತೆ ನೀಡಲಾಗುವುದು.
ತರಬೇತಿಯು ಊಟ ಮತ್ತು ವಸತಿ ಸಹಿತವಾಗಿ ಸಂಪೂರ್ಣ ಉಚಿತವಾಗಿರುತ್ತದೆ.
ಆಸಕ್ತ ಅಭ್ಯರ್ಥಿಗಳು ತಮ್ಮ ಫೋನ್/ಮೊಬೈಲ್ ನಂಬರ್‌ವುಳ್ಳ ಸ್ವವಿಳಾಸದ ಅರ್ಜಿಯೊಂದಿಗೆ ದಿನಾಂಕ 27.05.2024 ರಂದು ಚಿತ್ರದುರ್ಗ ರುಡ್‌ಸೆಟ್ ಸಂಸ್ಥೆಯ ಕಛೇರಿಯಲ್ಲಿ ನೇರ ಸಂದರ್ಶನದಲ್ಲಿ ಭಾಗವಹಿಸಲು ಈ ಮೂಲಕ ತಿಳಿಸಲಾಗಿದೆ.
ತರಬೇತಿಗೆ ಆಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ನೇರ ಸಂದರ್ಶನದ ಮೂಲಕ ನಡೆಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8618282445, 9449732805/ 08194- 223505