Rudset Institute Logo

“ Instead of writing someone else’s account through wage employment after three to five years of collegiate education, it is more meaningful to write one’s own account by embarking upon some self-employment "

- Dr. D. Veerendra Heggade

President, RUDSET Institutes
Veerendra Hegde
Call Us Now: +91 90680 00528

ಡೆಸ್ಕ್ ಟಾಪ್ ಪಬ್ಲಿಷಿಂಗ್ (ಕಂಪ್ಯೂಟರ್ ಡಿ.ಟಿ.ಪಿ.) ತರಬೇತಿ ಸಮಾರೋಪ ಸಮಾರಂಭಕಾರ್ಯಕ್ರಮ

ಚಿತ್ರದುರ್ಗ : ರುಡ್‌ಸೆಟ್ ಸಂಸ್ಥೆಯು ಜಿಲ್ಲಾ ಪಂಚಾಯತ,ಚಿತ್ರದುರ್ಗ ಇವರ ಪ್ರಾಯೋಜಿಕತ್ವದಲ್ಲಿ ಎನ್‌ಆರ್‌ಎಲ್‌ಎಂ ಯೋಜನೆ ಯಡಿಯಲ್ಲಿ ಉದ್ಯಮಶೀಲತಾಭಿವೃದ್ಧಿ – ಡೆಸ್ಕ್ ಟಾಪ್ ಪಬ್ಲಿಷಿಂಗ್ (ಕಂಪ್ಯೂಟರ್ ಡಿ.ಟಿ.ಪಿ.) ತರಬೇತಿ ಕಾರ್ಯಕ್ರಮವನ್ನು ೪೫ ದಿನಗಳÀ ಕಾಲಾವಧಿಯವರೆಗೆ ಆಯೋಜಿಸಲಾಗಿತ್ತು, ದಿನಾಂಕ: 18.10.2024 ರಿಂದ 01.12.2024 ರವರೆಗೆ ಆಯೋಜಿಸಲಾಗಿದ್ದು, ಈ ತರಬೇತಿ ಕಾರ್ಯಗಾರದ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿತ್ತು, ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ಸಿ.ಎಸ್.ಗಾಯತ್ರಿ ಕೆ.ಎಸ್.ಎಸ್, ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯತ, ಚಿತ್ರದುರ್ಗ ಇವರು ಭಾಗವಹಿಸಿದ್ದರು.
ಇವರು ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು ಹಾಗೂ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಇಂದಿನ ಆಧುನಿಕ ಜಗತ್ತಿನಲ್ಲಿ ಕಂಪ್ಯೂಟರ್ ತಾತ್ರಿಕ ಜ್ಞಾನ ಪ್ರತಿ ಕ್ಷೇತ್ರದಲ್ಲಿ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು. ತ್ರಂತ್ರಜ್ಞಾನ ದಿನದಿಂದ ದಿನಕ್ಕೆ ಬದಲಾಗುತ್ತಿರುತ್ತದೆ, ಬದಲಾದ ಮಾಹಿತಿಯ ಅರಿವನ್ನು ಸರಿಯಾಗಿ ರೂಢಿಸಿಕೊಂಡಲ್ಲಿ ವೃತ್ತಿಯನ್ನು ಸುಭದ್ರಗೊಳಿಸಿಕೊಳ್ಳಲು ಸಾಧ್ಯ. ನಿರಂತರವಾದ ಜ್ಞಾನದÀ ದಾಹದೊಂದಿಗೆ ಪರಿಣಾಮಕಾರಿಯಾದ ಬಾಷೆಯ ಕಲಿಕೆಯಲ್ಲಿ ತೊಡಬೇಕು ಜೊತೆಗೆ ಹೆಚ್ಚು ಕುಶಲತೆಯನ್ನು ಕರಗತ ಮಾಡಿಕೊಳ್ಳುವುದರಿಂದ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಆದ್ದರಿಂದ ನಿರಂತರ ಕಲಿಕೆಯ ಬಯಕೆಯನ್ನು ರೂಢಿಸಿಕೊಂಡು ಡಿಜೈನಿಂಗ್ ಕ್ಷೇತ್ರದಲ್ಲಿ ಬೇಡಿಕೆ ಸೃಷ್ಠಿಸಿಕೊಳ್ಳಿ ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು. ಪ್ರತಿ ಹಂತದ ಸಣ್ಣ ಕಲಿಕೆ ಕೂಡ ಒಂದಲ್ಲ ಒಂದು ಹಂತದಲ್ಲಿ ಉಪಯೋಗಕ್ಕೆ ಬರುತ್ತದೆ, ಜೀವನದಲ್ಲಿ ಎದುರಾಗುವ ಕೆಲ ಸನ್ನಿವೇಶಗಳನ್ನ ಸಮರ್ಥವಾಗಿ ನಿಭಾಯಿಸಲು ಜ್ಞಾನ ಮತ್ತು ಆತ್ಮವಿಶ್ವಾಸ ಬಹಳ ಮುಖ್ಯ ಎಂದು ತಿಳಿಹೇಳಿದರು. ಎಂದು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಶ್ರೀಯುತ ಕುಮಾರಬಾಬು ಎಲ್‌ಡಿಎಮ್, ಲೀಡ್‌ಬ್ಯಾಂಕ್,ಚಿತ್ರದುರ್ಗ, ಇವರು ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಮುಂದಿನ ದಿನಗಳಲ್ಲಿ ಉದ್ಯಮವನ್ನು ನಡೆಸುವಾಗ ವ್ಯವಹಾರದಲ್ಲಿ ಏಳು-ಬೀಳುಗಳು ಕಾಣುವುದು ಸಹಜ, ಆದರೆ ಉದ್ಯಮಕ್ಕೆ ತೊಡಗಿಸಿರುವ ಮೂಲಬಂಡವಾಳಕ್ಕೆ ದಕ್ಕೆ ಬಾರದಂತೆ ಜಾಗ್ರತೆವಹಿಬೇಕು, ಲಾಭ/ ನಷ್ಟಗಳ ಬಗ್ಗೆ ಯೋಚಿಸಬೇಕು, ವ್ಯವಸ್ಥಿತವಾದ ಯೋಜನೆಯನ್ನು ರೂಪಿಸಿಕೊಂಡು ಸಾಮರ್ಥ್ಯಕ್ಕೆ ತಕ್ಕ ಕೆಲಸದ ಒಪ್ಪಂದಗಳನ್ನು ಮಾಡಿಕೊಳ್ಳಿರಿ ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀಯುತ ಯೋಗೇಶ್ವರಪ್ಪ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು, ಎನ್‌ಆರ್‌ಎಲ್‌ಎಂ, ಚಿತ್ರದುರ್ಗ ಇವರು ಉಪಸ್ಥಿತರಿದ್ದರು.
ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ರಾಧಮ್ಮ ಹೆಚ್.ಆರ್. ರವರು ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿ ಶಿಬಿರಾರ್ಥಿಗಳಿಗೆ ನೀವು ಪಡೆದ ತರಬೇತಿಯನ್ನು ಸದುಪಯೋಗ ಪಡೆಸಿಕೊಂಡು ಸ್ವ ಉದ್ಯೋಗಿಗಳಾಗಿ ಹಾಗೂ ಉತ್ತಮ ಜೀವನ ನಡೆಸುವಂತೆ ಶುಭ ಹಾರೈಸಿದರು. ನಿಮ್ಮ ಗ್ರಾಮದಲ್ಲಿರುವ ಇತರ ನಿರುದ್ಯೋಗಿ ಯುವಕ ಯುವತಿಯರಿಗೆ ಸಂಸ್ಥೆಯ ಬಗ್ಗೆ ತಿಳಿಸಿ ಹಾಗೂ ಅವರಿಗೂ ತgಬೇತಿ ಪಡೆದು ಸ್ವ ಉದ್ಯೋಗ ಮಾಡುವ ಅವಕಾಶ ಕಲ್ಪಸಲು ಸಹಕರಿಸಿ ಎಂದು ತಿಳಿಸಿದರು.
ಸಂಸ್ಥೆಯ ಉಪನ್ಯಾಸಕರಾದ ಶ್ರೀ ತೋಟಪ್ಪ ಎಸ್. ಗಾಣಿಗೇರ ರವರು ಕಾರ್ಯಕ್ರಮ ನಿರೂಪಿಸಿದರು ಮತ್ತು ಕೊನೆಯಲ್ಲಿ ವಂದನಾರ್ಪಣೆ ಮಾಡಿದರು.
ಒಟ್ಟು ಕಾರ್ಯಕ್ರಮದಲ್ಲಿ 33 ಜನ ಶಿಬಿರಾರ್ಥಿಗಳು ಸೇರಿದಂತೆ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.