ರುಡ್‌ಸೆಟ್ ಸಂಸ್ಥೆಯಲ್ಲಿ ಭಾರತ ಸರ್ಕಾರದ ಪ್ರಾಯೋಜಕತ್ವದಲ್ಲಿ ಚಿತ್ರದುರ್ಗ ಜಿಲ್ಲೆಯ ಎಮ್‌ಎಸ್‌ಎಮ್‌ಇ(ಕಿರು ಸಣ್ಣ ಮಧ್ಯಮ ಉದ್ಯಮಿಗಳು) ಉದ್ಯಮದಾರರಿಗೆ ಗ್ಲೋಬಲ್ ಪಫ್ಡ್ ರೈಸ್ ಕ್ಲಸ್ಟರ್, ವರ್ಚ್ಯಲ್ (ಆನ್‌ಲೈನ್) ಸಭೆ

ಚಿತ್ರದುರ್ಗ: ರುಡ್‌ಸೆಟ್ ಸಂಸ್ಥೆಯಲ್ಲಿ ಭಾರತ ಸರ್ಕಾರದ ಪ್ರಾಯೋಜಕತ್ವದಲ್ಲಿ ಚಿತ್ರದುರ್ಗ ಜಿಲ್ಲೆಯ ಎಮ್‌ಎಸ್‌ಎಮ್‌ಇ(ಕಿರು ಸಣ್ಣ ಮಧ್ಯಮ ಉದ್ಯಮಿಗಳು) ಉದ್ಯಮದಾರರಿಗೆ ಗ್ಲೋಬಲ್ ಪಫ್ಡ್ ರೈಸ್ ಕ್ಲಸ್ಟರ್, ವರ್ಚ್ಯಲ್ (ಆನ್‌ಲೈನ್) ಸಭೆಯನ್ನು ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿತ್ತು, ಈ ಕಾರ್ಯಗಾರವನ್ನು ಉದ್ದೇಶಿಸಿ ಭಾರತ ಸರ್ಕಾರದ ಗೌರವಾನ್ವಿತ ಹಣಕಾಸು ಮಂತ್ರಿಗಳಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಎಮ್‌ಎಸ್‌ಎಮ್‌ಇ ಉದ್ಯಮಿಗಳಿಗೆ ಭಾರತ ಸರ್ಕಾರದಿಂದ ಮತ್ತು ಬ್ಯಾಂಕ್‌ಗಳ ವತಿಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಈ ಕಾರ್ಯಗಾರದಲ್ಲಿ ಕೆನರಾ ಬ್ಯಾಂಕಿನ ಶ್ರೀಯುತ ಪಿ,ವಿ. ಜಯಕುಮಾರ, ಉಪಮಹಾಪ್ರಭಂದಕರು, ವೃತ್ತ ಕಛೇರಿ, ಮಂಗಳೂರು, ಶ್ರೀಮತಿ ಅನಿತಾ ಮಂಜುನಾಥ, ಕೆನರಾ ಬ್ಯಾಂಕ್,ವಿಭಾಗೀಯ ಪ್ರಭಂದಕರು, ಪ್ರಾದೇಶಿಕ ಕಛೇರಿ, ದಾವಣಗೆರೆ ಶ್ರೀಮತಿ ವಲರ್ಮತಿ ಬಿ.ಶಂಕರ್ ಮುಖ್ಯ ಪ್ರಭಂಧಕರು, ಕೆನರಾ ಬ್ಯಾಂಕ್, ಚಿತ್ರದುರ್ಗ, ಮತ್ತು ಶ್ರೀಮತಿ ರಾಧಮ್ಮ ಹೆಚ್.ಆರ್, ನಿರ್ದೇಶಕರು, ರುಡ್‌ಸೆಟ್ ಸಂಸ್ಥೆ, ಚಿತ್ರದುರ್ಗ. ಜಿಲ್ಲೆಯ ಎಮ್‌ಎಸ್‌ಎಮ್‌ಇ ಉದ್ಯಮಿಗಳು ಮತ್ತು ವಿವಿಧ ಬ್ಯಾಂಕಿನ ಅಧಿಕಾರಿವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.