Rudset Institute Logo

“ Instead of writing someone else’s account through wage employment after three to five years of collegiate education, it is more meaningful to write one’s own account by embarking upon some self-employment "

- Dr. D. Veerendra Heggade

President, RUDSET Institutes
Veerendra Hegde
Call Us Now: +91 90680 00528

Valedictory function of Electric Motor Rewinding and Repair Services

ಮೈಸೂರು : ರುಡ್‌ಸೆಟ್ ಸಂಸ್ಥೆಯು ಎನ್.ಆರ್.ಎಲ್.ಎಂ. ಜಿಲ್ಲಾ ಪಂಚಾಯತ್ ಮೈಸೂರು ಇವರ ಪ್ರಾಯೋಜಕತ್ವದಲ್ಲಿ ಉದ್ಯಮಶೀಲತಾಭಿವೃದ್ಧಿ – ಎಲೆಕ್ಟಿçಕ್ ಮೋಟಾರ್ ರಿವೈಂಡಿAಗ್ ಮತ್ತು ಪಂಪ್‌ಸೆಟ್ ರಿಪೇರಿ ತರಬೇತಿ ಕಾರ್ಯಕ್ರಮವನ್ನು ೩೦ ದಿನಗಳÀ ಕಾಲಾವಧಿಯವರೆಗೆ ಆಯೋಜಿಸಲಾಗಿದ್ದು, ಈ ತರಬೇತಿ ಕಾರ್ಯಗಾರದ ಉದ್ಘಾಟನಾ ಸಮಾರಂಭ ಕಾರ್ಯಕ್ರಮವನ್ನು ದಿನಾಂಕ:೦೨.೦೯.೨೦೨೩ ರ ಸಂಜೆ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿತ್ತು, ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಯುತ ನಿಂಗೇಗೌಡ, ಜನರಲ್ ಮ್ಯಾನೇಜರ್, ಕರ್ನಾಟಕ ಗ್ರಾಮೀಣ ಬ್ಯಾಂಕ್, ಕೇಂದ್ರ ಕಛೇರಿ, ಬಳ್ಳಾರಿ ಇವರು ಭಾಗವಹಿಸಿದ್ದರು.

ಇವರು ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು ಹಾಗೂ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಇಂದಿನ ಆಧುನಿಕ ಜಗತ್ತಿನಲ್ಲಿ ಎಲೆಕ್ಟಿçಕ್ ತಂತ್ರಜ್ಞಾನದ ಕ್ಷೇತ್ರ ವಿನೂತನ ರೀತಿಯಲ್ಲಿ ಬದಲಾವಣೆಗೆ ತೆರೆದುಕೊಂಡಿದೆ ಎಂದು ಅಭಿಪ್ರಾಯಪಟ್ಟರು. ಮೋಟಾರ್ ಮತ್ತು ಪಂಪ್‌ಸೆಟ್ ರಿಪೇರಿಯ ಉದ್ಯೋಗದ ಕ್ಷೇತ್ರ ಹೊಸ ಉದ್ಯೋಗವಕಾಶಗಳನ್ನು ಆಸ್ಪದ ನೀಡುತ್ತಿದೆ. ನಮ್ಮ ಸುತ್ತಿಲಿನ ನೀರಾವರಿ ಕೃಷಿ ವಲಯ ಹೆಚ್ಚಿನದಾಗಿ ಕೊಳವೆ ಬಾವಿ ನೀರಾವರಿ ಆಧಾರಿತವಾಗಿದ್ದು, ಇದರಲ್ಲಿ ವಿದ್ಯತ್‌ಗಳ ಏರುಪೇರು, ಹೆಚ್ಚಿನ ಬಳಕೆಯಿಂದಾಗಿ ದುರಸ್ತಿಗೆ ಬರುವ ಸಾಧ್ಯತೆಗಳು ಹೆಚ್ಚು. ಇದರಿಂದಾಗಿ ಎಲೆಕ್ಟಿçಕ್ ಮೋಟಾರ್ ಎಲ್ಲ ತರಹದ ಪಂಪ್‌ಸೆಟ್‌ಗಳ ರಿಪೇರಿ ಕುರಿತು ಜ್ಞಾನ ಮತ್ತು ಕೌಶಲ್ಯವುಳ್ಳವರಿಗೆ ಬೇಡಿಕೆಯಿದೆ ಎಂದು ಅಭಿಪ್ರಾಯಪಟ್ಟರು. ಇಂತಹ ಬೇಡಿಕೆಯುತ ಕ್ಷೇತ್ರದಲ್ಲಿ ಉದ್ಯಮವನ್ನು ಕಟ್ಟಿಕೊಳ್ಳಲು ಗ್ರಾಮೀಣ ಯುವಕರಿಗೆ ಪ್ರೇರಣಾತ್ಮಕವಾದ ಉದ್ಯಮಶೀಲತಾ ತರಬೇತಿಯೊಂದಿಗೆ ಕೌಶಲ್ಯಗಳನ್ನು ಕಲಿಸಿಕೊಡುವುದು ರುಡ್‌ಸೆಟ್ ಸಂಸ್ಥೆಯ ವಿಶೇಷ ಎಂದು ತಿಳಿಸಿದರು. ದುಡಿಯುವ ಕೈಗಳಿಗೆ ಅವಕಾಶಗಳನ್ನು ಸೃಷ್ಠಿಸುವಂತಹ ಪ್ರೋತ್ಸಾಹಿಸುವಂತಹ ಕಾಯಕವಾದಾಗ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಉದ್ಯೋಗವನ್ನು ಸುಸ್ಥಿರವಾಗಿ ನಡೆಸಿಕೊಂಡು ಹೋಗಲು ಗ್ರಾಹಕರ ಜೊತೆ ಉತ್ತಮ ಒಡನಾಟ, ಗುಣಮಟ್ಟದ ಸೇವಾ ಮನೋಭಾವ ಮತ್ತು ವಿಶ್ವಾಸವನ್ನು ಮೂಡಿಸುವ ವ್ಯವಹಾರ ಜ್ಞಾನ ಮುಖ್ಯ ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು. ವೃತ್ತಿಯಲ್ಲಿ ಬದ್ಧತೆಯಿಂದ ಕೆಲಸ ನಿರ್ವಹಿಸಿ ಯಶಸ್ಸು ಸಾಧಿಸಿರಿ ಎಂದು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶ್ರೀಯುತ ಶಂಕರನಾರಾಯಣ, ಪ್ರಾದೇಶಿಕ ಪ್ರಬಂಧಕರು, ಕರ್ನಾಟಕ ಗ್ರಾಮೀಣ ಬ್ಯಾಂಕ್, ಪ್ರಾದೇಶಿಕ ಕಚೇರಿ, ಮೈಸೂರು ಇವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಮೋಟಾರ್ ರಿವೈಂಡಿAಗ್ ಮತ್ತು ಪಂಪಸೆಟ್ ವೃತ್ತಿಯನ್ನು ಆಯ್ಕೆ ಮಾಡಿ ತರಬೇತಿಗೆ ಬಂದಿರುವುದು ನಿಮ್ಮ ಜೀವನದಲ್ಲಿ ಹೊಸ ತಿರುವನ್ನು ಸೃಷ್ಠಿ ಮಾಡುತ್ತದೆ ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು. ಬದುಕಿನಲ್ಲಿ ಯಶಸ್ಸನ್ನು ಸಾಧಿಸಲು ಪ್ರೇರಣೆ ಮತ್ತು ಪೂರಕವಾದ ತಿಳುವಳಿಕೆ ದೊರೆಯಲು ಇಂತಹ ತರಬೇತಿ ಕಾರ್ಯಗಾರಗಳು ನೆರವಾಗುತ್ತವೆ, ಕೆಲಸ ಮಾಡಲೇಬೇಕೆಂದು ಬಂದ ಮನಸುಗಳಿಗೆ ಸಕಾರಾತ್ಮಕ ಕಿಚ್ಚು ಅಚ್ಚಿದ ಸಮಯವಿದು, ಯೋಚನೆ ಮತ್ತು ಯೋಜನಗಳನ್ನು ಸರಿಯಾಗಿ ಅನುಷ್ಠಾನಗೊಳಿಸಿಕೊಳ್ಳಿರಿ, ತಾತ್ರಿಕ ಅನುಭವವನ್ನು ಉನ್ನತಪಡಿಸಿಕೊಂಡು ಯಶಸ್ಸು ಸಾಧಿಸಿ ಎಂದು ಆಶಿಸುತ್ತಾ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಶ್ರೀಮತಿ ಸರಿತಾ ಕೆ.ಎಸ್. ನಿರ್ದೇಶಕರು, ರುಡ್‌ಸೆಟ್ ಸಂಸ್ಥೆ, ಮೈಸೂರು ಇವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಬದುಕಿನಲ್ಲಿ ಯಶಸ್ಸನ್ನು ಸಾಧಿಸಲು ಪ್ರೇರಣೆ ಮತ್ತು ಪೂರಕವಾದ ತಿಳುವಳಿಕೆ ದೊರೆಯಲು ಇಂತಹ ತರಬೇತಿ ಕಾರ್ಯಗಾರಗಳು ನೆರವಾಗುತ್ತವೆ, ಆದ್ದರಿಂದ ತರಬೇತಿಯಲ್ಲಿ ಹೊಸದನ್ನು ಕಲಿಯಲು ಆಸಕ್ತಿವಹಿಸಿ ಎಂದು ಆಶಿಸುತ್ತಾ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಸಂಸ್ಥೆಯ ಉಪನ್ಯಾಸಕರಾದ ಶ್ರೀ ಆರ್. ಪಾಲ್‌ರಾಜ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಅತಿಥಿಗಳನ್ನು ಕಾರ್ಯಕ್ರಮಕ್ಕೆ ಪರಿಚಯಿಸುತ್ತಾ ಆತ್ಮೀಯವಾಗಿ ಸ್ವಾಗತಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಂಸ್ಥೆಯ ಉಪನ್ಯಾಸಕರಾದ ಶ್ರೀಮತಿ ಲತಾಮಣಿಯವರು ವಂದನಾರ್ಪಣೆ ಮಾಡಿದರು.