Inauguration of Women’s Tailoring Training
ಮೈಸೂರು : ರುಡ್ಸೆಟ್ ಸಂಸ್ಥೆಯ ವತಿಯಿಂದ ರಾಷ್ಟಿçÃಯ ಗ್ರಾಮೀಣ ಜೀವನೋಪಾಯ ಅಭಿಯಾನ, ಜಿಲ್ಲಾ ಪಂಚಾಯತ್, ಮೈಸೂರು ಇವರ ಪ್ರಾಯೋಜಕತ್ವದಲ್ಲಿ ೩೦ ದಿನಗಳ ಮಹಿಳೆಯರ ಟೈಲರಿಂಗ್ ತರಬೇತಿಯನ್ನು ಹಮ್ಮಿಕೊಂಡಿದ್ದು, ಈ ತರಬೇತಿಯ ಉದ್ಘಾಟನಾ ಸಮಾರಂಭವನ್ನು ದಿನಾಂಕ:೧೬.೧೧.೨೦೨೩ ರಂದು ಗುರುವಾರ ಸಂಜೆ ಸಂಸ್ಥೆಯ ಆವರಣದಲ್ಲಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ಮಣಿ, ಮಾಲೀಕರು, ಶ್ರೀದೇವಿ ಲೇಡೀಸ್ ಫ್ಯಾಷನ್ಸ್, ಹೂಟಗಳ್ಳಿ, ಮೈಸೂರು ಇವರು ಉಪಸ್ಥಿತರಿದ್ದರು.
ಇವರು ಕಾರ್ಯಕ್ರಮದಲ್ಲಿ ಜ್ಯೋತಿಯನ್ನು ಬೆಳಗಿಸಿದರು ಮತ್ತು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಮಹಿಳೆಯರು ಕೇವಲ ಕುಟುಂಬಕ್ಕೆ ಸೀಮಿತವಾಗಿರದೆ ತಮ್ಮ ಕೌಶಲ್ಯಗಳನ್ನು ಉಪಯೋಗಿಸಿ, ಸ್ವಉದ್ಯೋಗವನ್ನು ಮಾಡಿ ತಮ್ಮ ಕುಟುಂಬದ ಆದಾಯವನ್ನು ಹೆಚ್ಚಿಸಲು ಗಮನ ಹರಿಸಬೇಕು. ಯಾರೊಬ್ಬರ ಮೇಲೂ ಅವಲಂಬಿಗಳಾಗದೆ, ಮಹಿಳೆಯರು ಸ್ವಾವಲಂಬಿಗಳಾಗಬೇಕು. ಪ್ರತಿ ಯಶಸ್ವಿ ವ್ಯಕ್ತಿಯ ಹಿಂದೆ ಒಬ್ಬ ಹೆಣ್ಣು ಇರುತ್ತಾಳೆ ಎನ್ನುವುದು ರೂಢಿಮಾತು, ಆದರೆ ಒಬ್ಬ ಯಶಸ್ವಿ ಮಹಿಳೆಯಾಗಲು ಮನೆಯ ಎಲ್ಲರ ಸಹಕಾರ ಬೇಕು. ಈ ಟೈಲರಿಂಗ್ ಉದ್ಯೋಗ ಒಂದು ಸಾರ್ವತ್ರಿಕ ಉದ್ಯಮ ಮತ್ತು ಎಲ್ಲರಿಗೂ ಅವಶ್ಯಕವಿರುವ ಉತ್ಪನ್ನವನ್ನು ಒದಗಿಸುವ ಉದ್ಯಮ, ಮನೆಯಲ್ಲಿ ಒಂದು ಚಿಕ್ಕದಾಗಿ ಉದ್ಯಮವನ್ನು ಆರಂಭ ಮಾಡಿದರೂ ಮನೆಯನ್ನು ನಡೆಸುವಷ್ಟು ಆದಾಯ ಗಳಿಸಬಹುದು. ನೀವು ಹೇಗೆ ಸಂಸ್ಥೆಗೆ ಬಂದು ತರಬೇತಿ ಪಡೆಯುತ್ತಿದ್ದೀರೋ ಹಾಗೆಯೇ ನಿಮ್ಮ ಸುತ್ತಮುತ್ತ ಇರುವ ಮಹಿಳೆಯರಿಗೂ ಈ ಅವಕಾಶ ಪಡೆದುಕೊಳ್ಳಲು ಮಾಹಿತಿ ನೀಡಿ. ಇದರಿಂದ ಪ್ರತಿ ಆಸಕ್ತಿ ಮಹಿಳೆ ಕೂಡ ತರಬೇತಿ ಪಡೆದು ಸ್ವಾವಲಂಬಿಯಾಗಲು ಅವಕಾಶ ಸಿಗುತ್ತದೆ. ಇದರಿಂದ ದೇಶದಲ್ಲಿ ಮಹಿಳಾ ಸಬಲೀಕರಣವನ್ನು ಸಾಧಿಸಬಹುದು ಎಂದು ಶಿಬಿರಾರ್ಥಿಗಳಿಗೆ ಸಂದೇಶ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀಮತಿ ಸರಿತಾ, ನಿರ್ದೇಶಕರು ರುಡ್ಸೆಟ್ ಸಂಸ್ಥೆ, ಮೈಸೂರು ರವರು ಮಾತನಾಡುತ್ತಾ ಉಡುಪು ಮನುಷ್ಯನಿಗೆ ಮೂಲಭೂತ ಅವಶ್ಯಕತೆಗಳಲ್ಲಿ ಒಂದು, ವೈವಿಧ್ಯಮಯವಾಗಿ ಹೊಸ ವಿನ್ಯಾಸದ ಉಡುಪು ಧರಿಸಬೇಕೆಂಬ ಬಯಕೆ ಪ್ರತಿಯೊಬ್ಬರಿಗೂ ಇರುತ್ತದೆ, ಹಾಗಾಗಿ ವಸ್ತç ವಿನ್ಯಾಸ ಮಾಡುವ ವೃತ್ತಿಯವರಿಗೆ ಯಾವಾಗಲೂ ಬೇಡಿಕೆ ಇದ್ದೇ ಇರುತ್ತದೆ, ಅದನ್ನು ಸದುಪಯೋಗ ಪಡಿಸಿಕೊಂಡಾಗ ಉತ್ತಮ ಆದಾಯಗಳಿಸಿ ಏಳಿಗೆ ಹೊಂದಬಹುದು. ಟೈಲರಿಂಗ್ ವೃತ್ತಿ ತುಂಬಾ ಪ್ರಶಸ್ತ ಉತ್ತಮವಾದುದು, ಅದನ್ನು ಆರಿಸಿಕೊಂಡು ಕಲಿಯಲು ಬಂದಿರುವ ಶಿಬಿರಾರ್ಥಿಗಳಿಗೆ ಶುಭವಾಗಲಿ ಎಂದು ಹರಸಿದರು.
ಸಂಸ್ಥೆಯ ಉಪನ್ಯಾಸಕರಾದ ಶ್ರೀ ಪಾಲ್ರಾಜ್ ರವರು ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸ್ವಾಗತಿಸಿದರು. ಉಪನ್ಯಾಕರಾದ ಶ್ರೀಮತಿ ಲತಾಮಣಿ ಇವರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ೩೫ ಜನ ಶಿಬಿರಾರ್ಥಿಗಳು ಹಾಜರಿದ್ದರು.