Rudset Institute Logo

“ Instead of writing someone else’s account through wage employment after three to five years of collegiate education, it is more meaningful to write one’s own account by embarking upon some self-employment "

- Dr. D. Veerendra Heggade

President, RUDSET Institutes
Veerendra Hegde
Call Us Now: +91 90680 00528

Exhibition and Valedictory Programme

ಮೈಸೂರು : ರುಡ್‌ಸೆಟ್ ಸಂಸ್ಥೆಯು ಎನ್.ಆರ್.ಎಲ್.ಎಂ. ಜಿಲ್ಲಾ ಪಂಚಾಯತ್ ಮೈಸೂರು ಇವರ ಪ್ರಾಯೋಜಕತ್ವದಲ್ಲಿ ಉದ್ಯಮಶೀಲತಾಭಿವೃದ್ಧಿ – ಫೋಟೋಗ್ರಫಿ ಮತ್ತು ವೀಡೀಯೋಗ್ರಫಿ ತರಬೇತಿ ಕಾರ್ಯಕ್ರಮವನ್ನು ೩೦ ದಿನಗಳÀ ಕಾಲಾವಧಿಯವರೆಗೆ ಆಯೋಜಿಸಲಾಗಿದ್ದು, ಈ ತರಬೇತಿ ಕಾರ್ಯಗಾರದ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ದಿನಾಂಕ:೧೧.೦೧.೨೦೨೪ ರ ಸಂಜೆ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿತ್ತು, ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಯುತ ಉಮೇಶ್ ಪಿ.ಎಸ್., ಕ್ಷೇತ್ರೀಯ ಪ್ರಬಂಧಕರು, ಕೆನರಾ ಬ್ಯಾಂಕ್, ಕ್ಷೇತ್ರೀಯ ಕಚೇರಿ – ಗ್ರಾಮೀಣ, ಮೈಸೂರು ಇವರು ಭಾಗವಹಿಸಿದ್ದರು.

೩೦ ದಿನಗಳ ಕಾಲ ತರಬೇತಿಯಲ್ಲಿ ಅಭ್ಯರ್ಥಿಗಳು ಸೆರೆಹಿಡಿದ ಛಾಯಾಚಿತ್ರಗಳ ವಸ್ತುಪ್ರದರ್ಶನವನ್ನು ಶ್ರೀಯುತ ತಿಪ್ಪೇಸ್ವಾಮಿಯವರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಶ್ರೀಯುತ ಉಮೇಶ್ ಪಿ.ಎಸ್., ಕ್ಷೇತ್ರೀಯ ಪ್ರಬಂಧಕರು, ಕೆನರಾ ಬ್ಯಾಂಕ್, ಕ್ಷೇತ್ರೀಯ ಕಚೇರಿ – ಗ್ರಾಮೀಣ, ಮೈಸೂರು ಇವರು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು ಹಾಗೂ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಕತ್ತಲೆಯಿಂದ ಬೆಳಕಿನೆಡೆಗೆ ಕ್ರಾಂತಿಕಾರಿ ಹೆಜ್ಜೆಗುರುತುಗಳೊಂದಿಗೆ ಬೆಳೆದುಬಂದು ಉದ್ಯಮ ಫೋಟೋಗ್ರಫಿ. ಆಧುನಿಕ ಜಗತ್ತಿಗೆ ಹೊಸ ಹೊಸ ವಿನ್ಯಾಸಗಳ ಜೊತೆ ತಂತ್ರಜ್ಞಾನದೊAದಿಗೆ ಬೆರೆತು ವಿನೂತನ ರೀತಿಯಲ್ಲಿ ಬದಲಾವಣೆಯಾಗುತ್ತಾ ಬೆಳೆವಣಿಗೆಗೆ ಅವಕಾಶ ಕಲ್ಪಿಸಿದ ಉದ್ಯಮ ಫೋಟೋಗ್ರಫಿ ಎಂದು ಅಭಿಪ್ರಾಯಪಟ್ಟರು. ಪ್ರಸ್ತುತ ಸ್ಪರ್ದಾತ್ಮಕ ವ್ಯವಹಾರಗಳಲ್ಲಿ ವಿಪುಲ ಅವಕಾಶಗಳನ್ನು ಸೃಷ್ಟಿಸಿದ ಹೆಗ್ಗಳಿಕೆ ಪೋಟೋಗ್ರಫಿ ಕ್ಷೇತ್ರದ್ದು, ಸೃಜನಾತ್ಮಕ ಮನೋಭಾವ ಮತ್ತು ಕೌಶಲ್ಯಭರಿತರು ಬೇಡಿಕೆಯನ್ನು ತಮ್ಮ ಕೆಲಸದಿಂದ ಪಡೆದುಕೊಳ್ಳುತ್ತಾರೆ. ಆದ್ದರಿಂದ ಸೋಲಿಗೆ ಕುಗ್ಗದೆ, ಬೇಸರ ಪಡದೆ, ಸೂರ್ಯಕಾಂತಿ ಹೂವಿನ ರೀತಿ ನಿರಂತರ ಪ್ರಯತ್ನಶೀಲತೆಯೊಂದಿಗೆ ಕೆಲಸದಲ್ಲಿ ನಿರತರಾಗಿರಿ ಎಂದು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಮತ್ತೋರ್ವ ಅತಿಥಿಗಳು ಶ್ರೀ ತಿಪ್ಪೇಸ್ವಾಮಿಯವರು, ಹಿರಿಯ ವನ್ಯಜೀವಿ ಛಾಯಾಗ್ರಾಹಕರು, ಮೈಸೂರು ಇವರು ಮಾತನಾಡುತ್ತಾ ನಮ್ಮಲ್ಲಿರುವ ಆತ್ಮಸ್ಥೆöÊರ್ಯ ಬೆಳವಣಿಗೆಗೆ ಮೂಲ ಕಾರಣವಾಗುತ್ತದೆ, ಎಂತಹ ಸಂಕಷ್ಟದ ಸನಿವೇಶದಲ್ಲೂ ನಮ್ಮ ಧನಾತ್ಮಕ ಚಿಂತನೆಗಳಿAದ ವಿಮುಖರಾಗಬಾರದು. ಸಮಸ್ಯೆಗಳನ್ನು ಸವಾಲುಗಳಾಗಿ ಸ್ವೀಕರಿಸಿರಿ, ವಿಶ್ವಾಸದೊಂದಿಗೆ ಹೊಸತನಕ್ಕೆ ಹೊಂದಿಕೊಳ್ಳುತ್ತಾ ನಿರಂತರ ಪ್ರಯತ್ನಪೂರಕ ಕಾಯಕದಲ್ಲಿ ನಿರತರಾಗಿರಿ ಎಂದು ಸಲಹೆ ನೀಡಿದರು. ನಮ್ಮೊಳಗಿನ ಶಕ್ತಿಯನ್ನು ನಾವು ಜಾಗೃತಗೊಳಿಸಿಕೊಳ್ಳುತ್ತಾ ಇರಬೇಕು, ಪ್ರತಿಯೊಬ್ಬರಲ್ಲಿಯೂ ಒಂದಲ್ಲ ಒಂದು ರೀತಿಯ ಕೌಶಲ್ಯವಿರುತ್ತದೆ, ಮಂತ್ರಕ್ಕೆ ಬಾರದ ಅಕ್ಷರವಿಲ್ಲ, ಹಾಗೆಯೇ ಅಯೋಗ್ಯನಾದ ಮನುಷ್ಯನಿಲ್ಲ, ಎಲ್ಲರೂ ಯೋಗ್ಯರೇ. ಪ್ರತಿ ಸನ್ನಿವೇಶದಲ್ಲಿ ನಮ್ಮನ್ನು ನಾವು ಸಾಣೇ ಹಿಡಿಯುವ ಕೆಲಸವನ್ನು ಮಾಡಿಕೊಳ್ಳುತ್ತಾ ಕೌಶಲ್ಯದಲ್ಲಿ ಚುರುಕುತನವನ್ನು ರೂಢಿಸಿಕೊಳ್ಳಬೇಕು ಎಂದು ತಮ್ಮ ವೃತ್ತಿಬದುಕಿನ ಯಶೋಗಾಥೆಗಳೊಂದಿಗೆ ಶಿಬಿರಾರ್ಥಿಗಳನ್ನು ಹುರಿದುಂಬಿಸಿದರು. ಕೆಲಸ ಮಾಡಲೇಬೇಕೆಂದು ಬಂದ ಮನಸುಗಳಿಗೆ ಸಕಾರಾತ್ಮಕ ಕಿಚ್ಚು ಅಚ್ಚಿದ ಸಮಯವಿದು, ಯೋಚನೆ ಮತ್ತು ಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಳಿಸಿಕೊಳ್ಳಿರಿ, ತಾಂತ್ರಿಕ ಅನುಭವವನ್ನು ಉನ್ನತಪಡಿಸಿಕೊಂಡು ಬದ್ದತೆಯಿಂದ ಕೆಲಸ ಮಾಡಿ ಯಶಸ್ಸು ಸಾಧಿಸಿ ಎಂದು ಆಶಿಸುತ್ತಾ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಶ್ರೀ ಗಿರಿಮಂಜು, ಛಾಯಾಗ್ರಾಹಕ ತರಬೇತುದಾರರು, ಮೈಸೂರು ಇವರು ಪ್ರಸ್ತಾವಿಕವಾಗಿ ಮಾತನಾಡುತ್ತಾ ಛಾಯಾಗ್ರಾಹಕರು ಅಣುವಿನಿಂದ ಹಿಡಿದು ಅನಂತದವರೆಗೆ ಸೆರೆಹಿಡಿಯಬಹುದು. ಇತಿಹಾಸದ ಆಗುಹೋಗುಗಳನ್ನು ಮುಂದಿನ ಸಮಾಜಕ್ಕೆ ತಿಳಿಸುವ ಮಹತ್ವದ ಜವಾಬ್ದಾರಿ ಛಾಯಾಗ್ರಾಹಕರ ಮೇಲಿದೆ ಎಂದು ಶಿಬಿರಾರ್ಥಿಗಳಿಗೆ ತಿಳಿ ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ಬಾಲಚಂದ್ರ, ನಿವೃತ್ತ ಎಲ್‌ಡಿಸಿಎಂ, ಮಡಿಕೇರಿ, ಶ್ರೀ ಸೂರ್ಯಪ್ರಕಾಶ್, ಹಿರಿಯ ರಾಜ್ಯ ಮಟ್ಟದ ಛಾಯಾಗ್ರಾಹಕ ತರಬೇತುದಾರರು, ಬೆಂಗಳೂರು ಇವರುಗಳು ಉಪಸ್ಥಿತರಿದ್ದರು.
ಶ್ರೀಮತಿ ಸರಿತಾ ಕೆ.ಎಸ್. ನಿರ್ದೇಶಕರು, ರುಡ್‌ಸೆಟ್ ಸಂಸ್ಥೆ, ಮೈಸೂರು ಇವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಬದುಕಿನಲ್ಲಿ ಯಶಸ್ಸನ್ನು ಸಾಧಿಸಲು ಪ್ರೇರಣೆ ಮತ್ತು ಪೂರಕವಾದ ತಿಳುವಳಿಕೆ ದೊರೆಯಲು ಇಂತಹ ತರಬೇತಿ ಕಾರ್ಯಗಾರಗಳು ನೆರವಾಗುತ್ತವೆ, ಆದ್ದರಿಂದ ತರಬೇತಿಯಲ್ಲಿ ಹೊಸದನ್ನು ಕಲಿಯಲು ಆಸಕ್ತಿವಹಿಸಿ ಎಂದು ಗ್ರಾಹಕರ ಜೊತೆ ಉತ್ತಮ ಒಡನಾಟ, ಗುಣಮಟ್ಟದ ಸೇವಾ ಮನೋಭಾವ ಮತ್ತು ವಿಶ್ವಾಸವನ್ನು ಮೂಡಿಸುವ ವ್ಯವಹಾರ ಜ್ಞಾನ ಮುಖ್ಯ ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.
ಸಂಸ್ಥೆಯ ಉಪನ್ಯಾಸಕರಾದ ಶ್ರೀ ಆರ್. ಪಾಲ್‌ರಾಜ್ ರವರು ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಪರಿಚಯಿಸುತ್ತಾ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪನ್ಯಾಸಕರಾದ ಶ್ರೀಮತಿ ಲತಾಮಣಿಯವರು ವಂದನಾರ್ಪಣೆ ಮಾಡಿದರು.
ಒಟ್ಟು ಕಾರ್ಯಕ್ರಮದಲ್ಲಿ ೧೦೦ ಜನ ಶಿಬಿರಾರ್ಥಿಗಳು (ಫೋಟೋಗ್ರಫಿ, ಬ್ಯೂಟಿಪಾರ್ಲರ್ ಮತ್ತು ಲಘು ಮೋಟಾರ್ ವಾಹನ ಚಾಲನಾ ತರಬೇತಿ) ಸೇರಿದಂತೆ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.