Rudset Institute Logo

“ Instead of writing someone else’s account through wage employment after three to five years of collegiate education, it is more meaningful to write one’s own account by embarking upon some self-employment "

- Dr. D. Veerendra Heggade

President, RUDSET Institutes
Veerendra Hegde
Call Us Now: +91 90680 00528

Celebration of 75th Republic Day and 32nd Anniversary of RUDSETI Mysuru

ಮೈಸೂರು : ರುಡ್‌ಸೆಟ್ ಸಂಸ್ಥೆಯಲ್ಲಿ ೭೫ನೇ ಗಣರಾಜ್ಯೋತ್ಸವದ ದಿನದ ಆಚರಣೆ ಮತ್ತು ಮೈಸೂರಿನ ರುಡ್‌ಸೆಟ್ ಸಂಸ್ಥೆ ಪ್ರಾರಂಭವಾಗಿ ೩೨ನೇ ವಾರ್ಷಿಕೋತ್ಸವದ ಸಂಭ್ರಮಾಚರಣೆಯನ್ನು ದಿನಾಂಕ ೨೬.೦೧.೨೦೨೪ ರಂದು ಬೆಳಿಗ್ಗೆ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀಯುತ ಸ್ನೇಕ್ ಶ್ಯಾಮ್, ಸಾಮಾಜಿಕ ಕಾರ್ಯಕರ್ತರು, ಮೈಸೂರು ರವರು ಧ್ವಜಾರೋಹಣ ನೆರವೇರಿಸಿದರು.

ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಭಾರತ ನಮ್ಮ ಪವಿತ್ರ ನಾಡು. ಜಗತ್ತಿನ ಅತ್ಯಂತ ಪ್ರಾಚೀನ ಸಂಸ್ಕೃತಿ ನಮ್ಮದು. ಭಾರತೀಯರಾದ ನಾವೆಲ್ಲ ವೇದಕಾಲದಿಂದಲೂ ಈ ನೆಲವನ್ನು ತಾಯಿಯ ರೂಪದಲ್ಲಿ ಪೂಜಿಸುತ್ತಿದ್ದೇವೆ. ಈ ನೆಲದ ಪ್ರತಿ ಅಂಶವೂ ನಮಗೆ ಪವಿತ್ರವೇ. ನಮ್ಮ ಭಾರತ ಪ್ರಜಾಪ್ರಭುತ್ವದ ತವರು ನೆಲವೆಂದು ಇಂದು ಜಗತ್ತಿನಲ್ಲಿ ಗುರುತಿಸಿಕೊಂಡಿದೆ ಎಂದು ಅಭಿಪ್ರಾಯಪಟ್ಟರು. ತಾಯಿ ಭಾರತಿಯ ಮಕ್ಕಳಾದ ನಮ್ಮ ಹಿರಿಯರು ಸರ್ವಸ್ವವನ್ನು ಈ ನೆಲದ ಹಿರಿಮೆಗಾಗಿ, ಗೌರವ ರಕ್ಷಣೆಗಾಗಿ ತ್ಯಾಗ ಮಾಡಿದ್ದಾರೆ. ಪರಕೀಯರ ಆಕ್ರಮಣಗಳಿಂದ ಈ ದೇಶವನ್ನು ರಕ್ಷಿಸಲು ತಮ್ಮ ಜೀವನವನ್ನೇ ಬಲಿದಾನ ಮಾಡಿದ್ದಾರೆ. ನಾವಿಂದು ಸಂವಿದಾನತ್ಮಕವಾದ ಪ್ರಜಾಪ್ರಭುತ್ವ ರಾಷ್ಟದಲ್ಲಿ ಸ್ವಾತಂತ್ರö್ಯದಿAದ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಅಣಿಮಾಡಿಕೊಟ್ಟ ಎಲ್ಲಾ ಮಹಾಪುರಷರ ಆದರ್ಶವನ್ನು ನೆನಪಿಸಿಕೊಳ್ಳಲು, ತಾಯಿ ಭಾರತಿಯನ್ನು ಮನಃಪೂರ್ವಕವಾಗಿ ಪೂಜಿಸಿ ಸಂಭ್ರಮಿಸುವ ದಿನ ಎಂದು ಸಂಭ್ರಮದ ಮಹತ್ವವನ್ನು ತಿಳಿಸಿ ಹೇಳಿದರು. ನಮ್ಮ ದೇಶದ ವೈಭವ, ಇತಿಹಾಸ, ಜ್ಞಾನ ವಿಜ್ಞಾನದ ಸಾಧನೆಗಳನ್ನು ನೆನಪು ಮಾಡಿಕೊಳ್ಳೋಣ, ಸವಾಲುಗಳನ್ನು ಅರ್ಥ ಮಾಡಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಸಂಕಲ್ಪ ಮಾಡೋಣ ಎಂದು ನೆರೆದಿರುವ ಶಿಬಿರಾರ್ಥಿಗಳಿಗೆ ಕರೆ ನೀಡುತ್ತಾ ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಷಯ ಹೇಳಿದರು.
ಕಾರ್ಯಕ್ರಮದಲ್ಲಿ ಮತ್ತೋರ್ವ ಅತಿಥಿಗಳಾದ ಶ್ರೀಯುತ ಹೆಚ್.ಎಸ್. ಕೃಷ್ಣಮೂರ್ತಿ ಯವರು ಮಾತನಾಡುತ್ತಾ ಜೀವ ನಮ್ಮ ಮಾತು ಕೇಳುವುದಿಲ್ಲ, ಆದರೆ ಜೀವನ ನಮ್ಮ ಮಾತು ಕೇಳುತ್ತದೆ. ನಾವು ಹೇಗೆ ಆಲೋಚಿಸಿ ರೂಢಿಸಿಕೊಳ್ಳುವ ಬದುಕು ನಮ್ಮದಾಗುತ್ತದೆ. ಜಗಳ, ದ್ವೇಷ ಬಿಟ್ಟು ಒಗ್ಗಟ್ಟಾಗಿ ಮುನ್ನೆಡೆಯೋಣ, ನಾವೆಲ್ಲರೂ ಒಂದೇ ಎಂದು ಭಾವಿಸಿ ದೇಶವನ್ನು ಸ್ವಾವಲಂಬಿ ರಾಷ್ಟçವನ್ನಾಗಿಸಲು ಕಟಿಬದ್ಧರಾಗೋಣ ಎಂದು ಕರೆ ನೀಡಿದರು. ಬೇಡದ್ದು ತನ್ನಷ್ಟಕ್ಕೆ ತಾನೇ ಬೆಳೆಯುತ್ತದೆ – ಅದು ನಿಸರ್ಗದ ನಿಯಮ, ಆದರೆ ನಮಗೆ ಬೇಕಾದ್ದನ್ನು ನಾವೇ ಬೆಳೆಸಿ ರೂಢಿಸಿಕೊಳ್ಳಬೇಕು. ಬುದ್ದಿ ಮತ್ತು ಮನಸ್ಸಿನಿಂದ ನಾವೆಲ್ಲಾ ಒಂದಾಗೋಣ, ಯಾರೂ ನಮ್ಮನ್ನು ಮುರಿಯಲು ಬಿಡದಿರೋಣ – ಆಗ ಮಾತ್ರ ನಾವು ಸ್ವಾತಂತ್ರö್ಯರು ಎಂದು ಅನಿಸಿಕೊಳ್ಳುವುದು ಎಂದು ಗಣರಾಜ್ಯೋತ್ಸವದ ಮಹತ್ವದ ಅರಿವನ್ನು ಮೂಡಿಸಿದರು. ಮೈಸೂರು ರುಡ್‌ಸೆಟ್ ಸಂಸ್ಥೆಯು ನಿರುದ್ಯೋಗ ನಿವಾರಣೆಯಲ್ಲಿ ಸತತ ೩೨ ವರ್ಷಗಳಿಂದ ಅವಿರತ ಪ್ರಯತ್ನದಲ್ಲಿ ತೊಡಗಿದೆ ಎಂದು ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಶ್ಲಾಘೀಸಿದರು.
ಶ್ರೀಮತಿ ಸರಿತಾ ಕೆ.ಎಸ್. ನಿರ್ದೇಶಕರು, ರುಡ್‌ಸೆಟ್ ಸಂಸ್ಥೆ, ಮೈಸೂರು ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇವರು ಕಾರ್ಯಕ್ರಮವನ್ನು ಕುರಿತು ಮಾತನಾಡುತ್ತಾ ರುಡ್‌ಸೆಟ್ ಸಂಸ್ಥೆಯ ದ್ಯೇಯೋದ್ದೇಶಗಳನ್ನು ವಿವರಿಸುತ್ತಾ, ಮೈಸೂರು ಭಾಗದಲ್ಲಿ ನಿರುದ್ಯೋಗ ನಿವಾರಣೆಯಲ್ಲಿ ರುಡ್‌ಸಟ್ ಸಂಸ್ಥೆಯ ಪಾತ್ರ, ನಡೆಸಿದ ತರಬೇತಿ ಕಾರ್ಯಕ್ರಮಗಳನ್ನು ಮೆಲುಕು ಹಾಕಿದರು. ಮೈಸೂರು ರುಡ್‌ಸೆಟ್ ಸಂಸ್ಥೆಯು ೩೨ ವರ್ಷಗಳಿಂದ ೯೧೪ ತರಬೇತಿ ಬ್ಯಾಚ್‌ಗಳನ್ನು ನಡೆಸಿದ ಹೆಗ್ಗಳಿಕೆಯೋಂದಿಗೆ ಸು. ೨೮೮೦೦ ಕ್ಕೂ ಹೆಚ್ಚು ಜನರಿಗೆ ಉದ್ಯಮಶೀಲತೆ ಮತ್ತು ಕೌಶಲ್ಯಾಧಾರಿತ ತರಬೇತಿಗಳನ್ನು ನೀಡಿದೆ. ಅದರಲ್ಲಿ ಸರಿಸುಮಾರು ೨೦೧೮೫ ಕ್ಕೂ ಹೆಚ್ಚು ಜನರು ಸ್ವ ಉದ್ಯೋಗಿಗಳಾಗಿದ್ದಾರೆ ಎಂದು ಈ ಕಾರ್ಯಕ್ಕೆ ಕಾರಣೀಭೂತರಾದ ಪರಮಪೂಜ್ಯ ಪದ್ಮವಿಭೂಷಣ ಡಾ. ಡಿ. ವೀರೇಂದ್ರ ಹಗ್ಗಡೆ ಯವರನ್ನು, ಅವರೊಂದಿಗೆ ಕೈಜೋಡಿಸಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ ಮತ್ತು ಕೆನರಾ ಬ್ಯಾಂಕ್ ನವರನ್ನು ಗೌರವದಿಂದ ಸ್ಮರಿಸಿದರು. ಮೈಸೂರು ರುಡ್‌ಸೆಟ್ ಸಂಸ್ಥೆಯಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಎಲ್ಲಾ ಬ್ಯಾಂಕಿನ ಅಧಿಕಾರಿಗಳನ್ನು ಮತ್ತು ಸಂಸ್ಥೆಯ ಎಲ್ಲಾ ಸಿಬ್ಬಂದಿವರ್ಗದವರನ್ನ ಅಭಿನಂದಿಸಿದರು. ಇಂದಿನ ಗಣತಂತ್ರ ದಿನದಲ್ಲಿ ನಾವೆಲ್ಲ ವಿಕಸಿತ ಭಾರತದ ಬೃಹತ್ ಹೆಜ್ಜೆಗೆ ಕೈ ಜೋಡಿಸಿ ಸ್ವಾಭಿಮಾನದ ಬದುಕನ್ನು ರೂಪಿಸಿಕೊಳ್ಳೋಣ ಎಂದು ಶಿಬಿರಾರ್ಥಿಗಳಿಗೆ ಕರೆ ನೀಡಿದರು.
ಶ್ರೀಯುತ ಸೂರ್ಯಪ್ರಕಾಶ್, ನ್ಯಾಷನಲ್ ಫೋಟೋಗ್ರಫಿ ತರಬೇತಿದಾರರು, ಶ್ರೀಯುತ ಡಿ.ಟಿ. ವೆಂಕಟೇಶ್, ಆರ್ಥಿಕ ಸಾಕ್ಷರ ಕೇಂದ್ರ, ಮೈಸೂರು ಮತ್ತು ಶ್ರೀ ಗಿರಿಮಂಜು, ಫೋಟೋಗ್ರಫಿ ತರಬೇತಿದಾರರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.
ಸಂಸ್ಥೆಯ ಉಪನ್ಯಾಸಕರಾದ ಶ್ರೀ ಆರ್. ಪಾಲ್‌ರಾಜ್ ರವರು ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಪರಿಚಯಿಸುತ್ತಾ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪನ್ಯಾಸಕರಾದ ಶ್ರೀಮತಿ ಲತಾಮಣಿಯವರು ವಂದನಾರ್ಪಣೆ ಮಾಡಿದರು. ಒಟ್ಟು ಕಾರ್ಯಕ್ರಮದಲ್ಲಿ ೫೦ ಜನ ಶಿಬಿರಾರ್ಥಿಗಳು (ಅಡ್ವಾನ್ಸ್÷್ಡ ಡಿಜಿಟಲ್ ಪೋಟೋಗ್ರಫಿ ತರಬೇತಿ) ಸೇರಿದಂತೆ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು ಹಾಗೂ ಶಿಬಿರಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.