Exhibition of Embroidery products made by trainees
ಮೈಸೂರು : ರುಡ್‌ಸೆಟ್ ಸಂಸ್ಥೆಯು ಎನ್.ಆರ್.ಎಲ್.ಎಂ. ಜಿಲ್ಲಾ ಪಂಚಾಯತ್ ಮೈಸೂರು ಇವರ ಪ್ರಾಯೋಜಕತ್ವದಲ್ಲಿ ಉದ್ಯಮಶೀಲತಾಭಿವೃದ್ಧಿ – ಎಂಬ್ರಾಯಿಡರಿ ಮತ್ತು ಫ್ಯಾಬ್ರಿಕ್ ಪೇಂಟಿAಗ್ ತರಬೇತಿ ಕಾರ್ಯಕ್ರಮವನ್ನು ೩೦ ದಿನಗಳÀ ಕಾಲಾವಧಿಯವರೆಗೆ ಆಯೋಜಿಸಲಾಗಿದ್ದು, ಈ ತರಬೇತಿಯಲ್ಲಿ ಶಿಬಿರಾರ್ಥಿಗಳು ಡಿಜೈನ್ ಮಾಡಿರುವ ಎಂಬ್ರಾಯಿಡರಿ, ಫ್ಯಾಬ್ರಿಕ್ ಪೇಂಟಿAಗ್‌ನ ವಸ್ತು ಪ್ರದರ್ಶನ ವನ್ನು ದಿನಾಂಕ ೦೯.೦೭.೨೦೨೪ ರಂದು ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿತ್ತು, ಜೊತೆಗೆ ಬ್ಯೂಟಿಪಾರ್ಲರ್ ತರಬೇತಿಯ ಸಮಾರೋಪ ಸಮಾರಂಭವನ್ನು ಇದೇ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ಜಯಂತಿ ಬಲ್ಲಾಳ್, ಫ್ಯಾಷನ್ ಮತ್ತು ಡಿಜೈನಿಂಗ್ ಕ್ಷೇತ್ರದ ಉದ್ಯಮಿ, ಮೈಸೂರು ಫ್ಯಾಷನ್ ವೀಕ್ ಇವರು ಭಾಗವಹಿಸಿದ್ದರು.
ಇವರು ಶಿಬಿರಾರ್ಥಿಗಳು ಡಿಜೈನ್ ಮಾಡಿರುವ ಉಡುಪುಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಇವರು ಬ್ಯೂಟಿಪಾರ್ಲರ್ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು ಹಾಗೂ ಎಲ್ಲರನ್ನೂ ಉದ್ದೇಶಿಸಿ ಮಾತನಾಡುತ್ತಾ ಫ್ಯಾಷನ್ ಉದ್ಯಮದಲ್ಲಿ ವಿನ್ಯಾಸಕರರಿಗೆ ವಿವಿಧ ರೀತಿಯ ಕೆಲಸಗಳಿವೆ. ಫ್ಯಾಷನ್ ವಿನ್ಯಾಸಕರು ಕ್ರಿಯಾತ್ಮಕ ಮತ್ತು ಕಲಾತ್ಮಕವಾಗಿ ಹಿತಕರವಾದ ಬಟ್ಟೆಗಳನ್ನು ವಿನ್ಯಾಸಗೊಳಿಸಲು ಪ್ರಯತ್ನಿಸುತ್ತಾರೆ. ಉಡುಪುಗಳಿಗೆ ವಿಭಿನ್ನ ನೋಟವನ್ನು ರಚಿಸುವ ಜವಾಬ್ದಾರಿ ಫ್ಯಾಷನ್ ವಿನ್ಯಾಸಕರದ್ದಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು. ಅಂತೆಯೇ ಬ್ಯೂಟಿಷಿಯನ್ ಮತ್ತು ಫ್ಯಾಷನ್ ಡಿಜೈನಿಂಗ್ ಉದ್ಯಮಿಗಳು ಜೊತೆಯಾಗಿ ಪರಸ್ಪರ ಹೊಂದಾಣಿಕೆಯಿAದ ಕೆಲಸ ಮಾಡಿದಲ್ಲಿ ಹೆಚ್ಚಿನ ಆದಾಯವನ್ನು ಗಳಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು. ದೈನಂದಿನ ಉಡುಗೆಗಾಗಿ ಧರಿಸಿರುವ ಹೆಚ್ಚಿನ ಉಡುಪುಗಳು ಸಾಂಪ್ರದಾಯಿಕ ಶೈಲಿಗಳ ಕಿರಿದಾದ ವ್ಯಾಪ್ತಿಯೊಳಗೆ ಬರುತ್ತವೆಯಾದರೂ, ಸಂಜೆಯ ಉಡುಗೆ ಅಥವಾ ಪಾರ್ಟಿ ಡ್ರೆಸ್ ಗಳಂತಹ ವಿಶೇಷ ಸಂದರ್ಭಗಳಲ್ಲಿ ಅಸಾಮಾನ್ಯ ಉಡುಪುಗಳನ್ನು ಸಾಮಾನ್ಯವಾಗಿ ಹುಡುಕಲಾಗುತ್ತದೆ ಉತ್ತಮ ಡಿಜೈನರ್/ ವಸ್ತç ವಿನ್ಯಾಸಕರು ಸೃಜನಾತ್ಮಕವಾಗಿ ಕೌಶಲ್ಯಭರಿತರಾದಲ್ಲಿ ಹೆಚ್ಚಿನ ಬೇಡಿಕೆಯನ್ನು ಗಿಟ್ಟಿಸಿಕೊಂಡು ಫ್ಯಾಷನ್ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬಹುದು ಎಂದು ಯುವ ಉದ್ಯಮಿಗಳಿಗೆ ಕಿವಿ ಮಾತು ಹೇಳಿದರು. ಬದುಕಿನ ವ್ಯವಹಾರಿಕ ಬಂಡಿಯಲ್ಲಿ ಸಾಕಷ್ಟು ಏರುಪೇರುಗಳು ಬಂದಾಗ ಸಮರ್ಥವಾಗಿ ನಿಭಾಯಿಸುವ ಸಕರಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಿರಿ ಎಂದು ಶುಭ ಹಾರೈಸಿದರು.
ಶ್ರೀ ಎಂ. ಲಿಂಗಣ್ಣ, ಆರ್‌ಸೆಟಿ ಸಂಸ್ಥೆಗಳ ರಾಜ್ಯ ನಿರ್ದೇಶಕರು (ನಿವೃತ್ತ) ಮೈಸೂರು ಇವರು ಪ್ರಸ್ತಾವಿಕವಾಗಿ ಮಾತನಾಡುತ್ತಾ ಬದಲಾಗುತ್ತಿರುವ ಫ್ಯಾಷನ್ ಜಗತ್ತಿಗೆ ತಕ್ಕಂತೆ ಪರಿವರ್ತನೆಯನ್ನು ಉದ್ಯೋಗದಲ್ಲಿ ಅಳವಡಿಸಿಕೊಳ್ಳಿ ಎಂದು ಶಿಬಿರಾರ್ಥಿಗಳಿಗೆ ತಿಳಿ ಹೇಳಿದರು.
ಶ್ರೀಮತಿ ಸರಿತಾ ಕೆ.ಎಸ್. ನಿರ್ದೇಶಕರು, ರುಡ್‌ಸೆಟ್ ಸಂಸ್ಥೆ, ಮೈಸೂರು ಇವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಬದುಕಿನಲ್ಲಿ ಯಶಸ್ಸನ್ನು ಸಾಧಿಸಲು ಪ್ರೇರಣೆ ಮತ್ತು ಪೂರಕವಾದ ತಿಳುವಳಿಕೆ ದೊರೆಯಲು ಇಂತಹ ತರಬೇತಿ ಕಾರ್ಯಗಾರಗಳು ನೆರವಾಗುತ್ತವೆ, ಆದ್ದರಿಂದ ತರಬೇತಿಯಲ್ಲಿ ಹೊಸದನ್ನು ಕಲಿಯಲು ಆಸಕ್ತಿವಹಿಸಿ ಎಂದು ಗ್ರಾಹಕರ ಜೊತೆ ಉತ್ತಮ ಒಡನಾಟ, ಗುಣಮಟ್ಟದ ಸೇವಾ ಮನೋಭಾವ ಮತ್ತು ವಿಶ್ವಾಸವನ್ನು ಮೂಡಿಸುವ ವ್ಯವಹಾರ ಜ್ಞಾನ ಮುಖ್ಯ ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.
ಸಂಸ್ಥೆಯ ಉಪನ್ಯಾಸಕರಾದ ಶ್ರೀ ಆರ್. ಪಾಲ್‌ರಾಜ್ ರವರು ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಪರಿಚಯಿಸುತ್ತಾ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪನ್ಯಾಸಕರಾದ ಶ್ರೀಮತಿ ಲತಾಮಣಿಯವರು ವಂದನಾರ್ಪಣೆ ಮಾಡಿದರು.
ಒಟ್ಟು ಕಾರ್ಯಕ್ರಮದಲ್ಲಿ ೯೦ ಜನ ಶಿಬಿರಾರ್ಥಿಗಳು (ಬ್ಯೂಟಿಪಾರ್ಲರ್ ಮತ್ತು ಎಂಬ್ರಾಯಿಡರಿ ತರಬೇತಿ) ಸೇರಿದಂತೆ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.