Skill Day Celebration – 2024
ಮೈಸೂರು : ರುಡ್‌ಸೆಟ್ ಸಂಸ್ಥೆಯಲ್ಲಿ ವಿಶ್ವ ಯುವ ಕೌಶಲ್ಯ ದಿನದ ಸಂಭ್ರಮಾಚರಣೆಯನ್ನು ದಿನಾಂಕ:೧೫.೦೭.೨೦೨೪ರ ಸೋಮವಾರ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿ ರುಡ್‌ಸೆಟ್ ಸಂಸ್ಥೆಯಿAದ ತರಬೇತಿ ಪಡೆದು ವಿವಿಧ ಕ್ಷೇತ್ರಗಳಲ್ಲಿ ಯಶಸ್ವಿಯಾದ ಇಬ್ಬರು ಯುವ ಉದ್ಯಮಶೀಲರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ವಿ.ಎನ್. ನಾಗೇಶ್, ಲೀಡ್ ಡಿಸ್ಟಿçಕ್ಟ್ ಮ್ಯಾನೇಜರ್, ಎಸ್.ಬಿ.ಐ. ಲೀಡ್ ಬ್ಯಾಂಕ್, ಮೈಸೂರು ಇವರು ಭಾಗವಹಿಸಿದ್ದರು.
ಇವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ನಾವು ಯಾವಾಗಲೂ, ಯಾವ ಪರಿಸ್ಥಿತಿಗೂ ಪ್ರಸ್ತುತವಾಗಿ ಉಳಿಯಲು ಕೌಶಲ್ಯವನ್ನು ಉನ್ನತೀಕರಿಸುವುದು ಯಶಸ್ಸಿನ ಗುಟ್ಟು ಎಂದು ಅಭಿಪ್ರಾಯಪಟ್ಟರು. ಹೊಸ ಕೌಶಲ್ಯಗಳನ್ನು ಕಲಿಯುತ್ತಿರಬೇಕು, ಆ ಮೂಲಕ ನಮ್ಮ ಅಗತ್ಯತೆಯ ಮೌಲ್ಯಗಳನ್ನು ಬೆಳೆಸುತ್ತಾ ಹೋಗಬೇಕು, ನಮ್ಮ ದೈನಂದಿನ ಜೀವನದಲ್ಲಿ ಕೆಲಸ, ಕೌಶಲ್ಯಗಳ ಜೊತೆ ಸೃಜನಾತ್ಮಕವಾಗಿ ಹೊಸದನ್ನು ಕಲಿಯುವುದರಿಂದ, ಕೌಶಲ್ಯದ ಮಟ್ಟವನ್ನು ಬೆಳೆಸಿಕೊಳ್ಳುತ್ತಾ ಇದ್ದರೆ ಆಗ ನಾವು ಯಾವ ಕಾಲಕ್ಕೂ ಸಲ್ಲುವವರಾಗಿ, ಎಂದಿಗೂ ಪ್ರಸ್ತುತವಾಗಿ ಉಳಿಯುತ್ತೇವೆ ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು. ನಾವು ಜೀವನದಲ್ಲಿ ಹೊಸ ವಿಷಯಗಳನ್ನು, ಹೊಸ ಕೌಶಲ್ಯಗಳನ್ನು ಕಲಿಯದೆ ಇದ್ದರೆ ಕೆಲ ಸಮಯಗಳ ನಂತರ ಜೀವನದಲ್ಲಿ ಆಸಕ್ತಿ ಕಳೆದುಕೊಳ್ಳುತ್ತೇವೆ, ಕೌಶಲ್ಯ ಎಂಬುದಕ್ಕೆ ಯಾವುದೇ ಕಾಲದ ಮಿತಿಯಿಲ್ಲ, ಕಾಲ ಕಾಲಕ್ಕೆ ತಕ್ಕಂತೆ ನಾವು ಹೇಗೆ ಕೆಲಸ ಮಾಡುತ್ತೇವೆಯೋ ಹಾಗೆ ಆ ಕೌಶಲ್ಯ ವೃದ್ಧಿಯಾಗುತ್ತ ಹೋಗುತ್ತದೆ, ಅದು ನಮಗೆ ನಾವೇ ಕಂಡುಕೊಳ್ಳಬಹುದಾದ ಕೊಡುಗೆ, ಇದರಿಂದ ಜೀವನದಲ್ಲಿ ಉತ್ಸಾಹ, ಜೀವನ ಪ್ರೀತಿ ಮತ್ತು ಶಕ್ತಿ ಹೆಚ್ಚುತ್ತದೆ ಎಂದು ತಿಳಿಸಿದರು. ಯುವ ಸಮುದಾಯ ಪದವೀಧರರಾದರೆ ಮಾತ್ರ ಸಾಲದು, ಕೌಶಲ್ಯ ವೃದ್ದಿಸಿಕೊಳ್ಳಬೇಕು, ಆಧುನಿಕರಣ ತಂತ್ರಜ್ಞಾನಭರಿತ ಉದ್ಯೋಗಗಳಿಗೆ ಸಿದ್ದರಾಗಬೇಕು ಎಂದು ಯುವ ಸಮುದಾಯಕ್ಕೆ ಕರೆ ನೀಡಿದರು. ಕೆಲವು ಜನರಿಗೆ ತಿಳುವಳಿಕೆ ಮತ್ತು ಕೌಶಲ್ಯದ ನಡುವೆ ಗೊಂದಲವಿದೆ. ಪುಸ್ತಕಗಳನ್ನು ಓದಿ, ಇಂಟರ್ ನೆಟ್ ನೋಡಿ ಮಾಹಿತಿ ಗಳಿಸಿಕೊಂಡಿದ್ದರೆ ಅದು ತಿಳುವಳಿಕೆ ಮಾತ್ರ, ವೀಡಿಯೋ ನೋಡಿ ಸಾಗರದಲ್ಲಿ ಈಜಲು ಸಾದ್ಯವೇ? ಅದನ್ನು ಸ್ವತಃ ರೂಢಿಸಿಕೊಳ್ಳಬೇಕು, ಸ್ವತಃ ನೀರಿಗೆ ಇಳಿದು ಸತತವಾಗಿ ಅಭ್ಯಾಸ ಮಾಡಿದರೆ ಮಾತ್ರ ಈಜು ಕಲಿಯಲು ಸಾಧ್ಯ, ಅಂತೆಯೇ ಕೆಲಸದಲ್ಲಿ ಕೌಶಲ್ಯಭರಿತರಾದರೆ ಜೀವನವೆಂಬ ಸಾಗರದಲ್ಲಿ ಈಜಲು ಸಾದ್ಯ ಎಂದು ತಿಳಿ ಹೇಳಿದರು. ಇಂದಿನ ಸಂಧರ್ಭದಲ್ಲಿ ಯಾವಾಗಲೂ ನಾವು ಪ್ರಸ್ತುತವಾಗಿರಲು ನಮ್ಮಲ್ಲಿರುವ ಕೌಶಲ್ಯಗಳನ್ನು ಹರಿತಗೊಳಿಸಿ, ಬ್ಯಾಂಕಿನೊAದಿಗೆ ಉತ್ತಮ ಭಾಂದವ್ಯವನ್ನು ವೃದ್ಧಿಸಿಕೊಳ್ಳಿ ಉದ್ಯಮದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಮತ್ತು ಜೀವನದಲ್ಲಿ ಯಶಸ್ಸು ಸಾಧಿಸಿರಿ ಎಂದು ಯುವ ಉದ್ಯಮಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಸರಿತಾ ಕೆ.ಎಸ್. ರವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಇವರು ಮಾತನಾಡುತ್ತಾ ಜೀವನದಲ್ಲಿ ಏಳಿಗೆ ಸಾಧಿಸಲು ವೃತ್ತಿ ಕೌಶಲ್ಯಗಳ ಅಭಿವೃದ್ಧಿ ಮಾಡಿಕೊಳ್ಳುವುದು ಮುಖ್ಯ, ಕೌಶಲ್ಯಗಳಲ್ಲಿ ಮೂರು ವಿಧ – ಅರಿವಿನ ಕೌಶಲ್ಯಗಳು, ತಾಂತ್ರಿಕ ಕೌಶಲ್ಯಗಳು ಮತ್ತು ಪರಸ್ಪರ ಕೌಶಲ್ಯ ಗಳನ್ನು ಅಭಿವೃದ್ಧಿಗೊಳಿಸಿಕೊಳ್ಳುವುದರಿಂದ ವೃತ್ತಿಯಲ್ಲಿ ದಕ್ಷತೆ ಮತ್ತು ನೈಪುಣ್ಯತೆಯನ್ನು ಸಾಧಿಸಬಹುದು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ಡಿ.ಟಿ. ವೇಂಕಟೇಶ್, ಸಮಾಲೋಚಕರು, ಆರ್ಥಿಕ ಸಾಕ್ಷರ ಕೇಂದ್ರ, ಮೈಸೂರು ಇವರು ಭಾಗವಹಿಸಿದ್ದರು.
ಶ್ರೀ ನವೀನ್, ದೇಸಿರಿ ಉತ್ಪನ್ನದ ಮಾಲೀಕರು, ಕೆ.ಆರ್. ನಗರ, ಮೈಸೂರು ಮತ್ತು ಶ್ರೀಮತಿ ಶ್ವೇತಾ, ಚಾರ್ವಿ ಐ ಫ್ಯಾಷನ್, ಆಲನಹಳ್ಳಿ, ಮೈಸೂರು ಇವರುಗಳು ಯಶಸ್ವಿ ಉದ್ಯಮಶೀಲ ಗೌರವ ಸನ್ಮಾನ ಸ್ವೀಕರಿಸಿದರು. ಶ್ರೀ ನವೀನ್ ರವರು ತಮ್ಮ ಯಶೋಗಾಥೆಯ ಅನುಭವವನ್ನು ಹಂಚಿಕೊಳ್ಳುತ್ತಾ, ಸಾಂಪ್ರದಾಯಿಕ ಉದ್ಯೋಗಕ್ಕೆ ತಾಂತ್ರಿಕತೆಯ ಲೇಪವನ್ನು ನೀಡಿ, ಕೆಲಸದಲ್ಲಿ ಸೂಕ್ಷö್ಮಗಳನ್ನು ಅರ್ಥಮಾಡಿಕೊಂಡು ಕೌಶಲ್ಯದ ನೈಪುಣ್ಯತೆಯನ್ನು ಸಾಧಿಸಿ ಸುಸ್ಥಿರ ಅಭಿವೃದ್ಧಿಯನ್ನು ಪಡೆಯಿರಿ ಎಂದು ಯುವ ಉದ್ಯಮಿಗಳಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಅತಿಥಿಗಳನ್ನು ಸಂಸ್ಥೆಯ ಉಪನ್ಯಾಸಕರಾದ ಶ್ರೀಯುತ ಪಾಲ್‌ರಾಜ್ ಆರ್. ರವರು ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಸಂಸ್ಥೆಯ ಉಪನ್ಯಾಸಕರಾದ ಶ್ರೀಮತಿ ಲತಾಮಣಿ ಯವರು ಕಾರ್ಯಕ್ರಮವನ್ನು ನಿರೂಪಿಸಿದರು ಒಟ್ಟು ಕಾರ್ಯಕ್ರಮದಲ್ಲಿ ೫೫ ಜನ ಶಿಬಿರಾರ್ಥಿಗಳು ಸೇರಿದಂತೆ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.