Rudset Institute Logo

“ Instead of writing someone else’s account through wage employment after three to five years of collegiate education, it is more meaningful to write one’s own account by embarking upon some self-employment "

- Dr. D. Veerendra Heggade

President, RUDSET Institutes
Veerendra Hegde
Call Us Now: +91 90680 00528

Valedictory programme of Embroidery training and Installation and Servicing of CCTV Camera

ಮೈಸೂರು : ರುಡ್‌ಸೆಟ್ ಸಂಸ್ಥೆಯು ಸಂಜೀವಿನಿ – ಎನ್‌ಆರ್‌ಎಲ್‌ಎಂ ಜಿಲ್ಲಾ ಪಂಚಾಯತ್ ಮೈಸೂರು ಇವರ ಪ್ರಾಯೋಜಕತ್ವದಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ ಮತ್ತು ರಿಪೇರಿ ತರಬೇತಿ (೧೩ ದಿನಗಳು) ಹಾಗೂ ಎಂಬ್ರಾಯಿಡರಿ ಮತ್ತು ಫ್ಯಾಬ್ರಿಕ್ ಪೇಂಟಿAಗ್ ತರಬೇತಿ (೩೦ ದಿನಗಳು) ಕಾರ್ಯಕ್ರಮಗಳನ್ನು, ಈ ತರಬೇತಿ ಕಾರ್ಯಗಾರದ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ದಿನಾಂಕ ೧೨.೦೭.೨೦೨೪ ರಂದು ಸಂಜೆ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿತ್ತು, ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಕೆ ಬಾಲಚಂದ್ರ, ರಾಜ್ಯ ಮಟ್ಟದ ಹಿರಿಯ ಸಂಪನ್ಮೂಲ ವ್ಯಕ್ತಿಗಳು ಹಾಗೂ ಕಾರ್ಪೋರೇಷನ್ ಬ್ಯಾಂಕಿನ ನಿವೃತ್ತ ಮುಖ್ಯ ಪ್ರಬಂಧÀಕರು, ಮಡಿಕೇರಿ ರವರು ಭಾಗವಹಿಸಿದ್ದರು.
ಇವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು ಹಾಗೂ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಬದುಕಿನ ಎಲ್ಲಾ ಸಮಸ್ಯೆಗಳಿಗೆ ನಮ್ಮ ಆಲೋಚನೆಗಳೆ ಮೂಲ, ಸರಿಯಾದ ಜ್ಞಾನವೇ ಎಲ್ಲಾ ಸಮಸ್ಯೆಗಳಿಗೆ ಪರಿಹಾರ, ಆಗಾಗಿ ಉತ್ತಮ ಜ್ಞಾನ ಮತ್ತು ಆಲೋಚನೆಗಳಿಂದ ನಮ್ಮ ಬದುಕನ್ನು ಸಧೃಡಗೊಳಿಸಿಕೊಳ್ಳುವ ಎಂದು ಅಭಿಪ್ರಾಯಪಟ್ಟರು. ನಮ್ಮ ಬದುಕಿನಲ್ಲಿ ನಡೆಯುವುದೆಲ್ಲಾ ಕರ್ಮದ ಫಲವೇ ಆಗಿರುತ್ತದೆ. ನಾವು ಮಾಡುವ ಕೆಲಸದಲ್ಲಿ ನಿಸ್ವಾರ್ಥದಿಂದ ನಡೆಯುವ, ಸಮಸ್ಯೆಗಳಿಂದ ವಿಮುಖರಾಗಬೇಡಿ, ಪರಿಹಾರದ ಕಡೆ ಯೋಚಿಸಿ, ಆಗ ಹೊಸ ಉದ್ಯೋಗದ ಅವಕಾಶ ಗೋಚರಿಸುತ್ತದೆ ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು. ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ ಮತ್ತು ರಿಪೇರಿ ಇಂದಿನ ತಂತ್ರಜ್ಞಾನ ಯುಗದಲ್ಲಿ ತುಂಬಾ ಬೇಡಿಕೆ ಮತ್ತು ಉದ್ಯೋಗಕ್ಕೆ ಅವಕಾಶಗಳಿವೆ. ಅಂತೆಯೇ ಫ್ಯಾಷನ್ ಜಗತ್ತಿನಲ್ಲಿ ಎಂಬ್ರಾಯಿಡರಿ ಕಲೆಗೆ ಅತ್ಯುತ್ತಮ ಅವಕಾಶಗಳಿವೆ ತಾಳ್ಮೆ ಯಿಂದ ಕುಶಲತೆಯಲ್ಲಿ ತೊಡಗಿರಿ ಎಂದು ಕಿವಿ ಮಾತು ಹೇಳಿದರು. ಉನ್ನತ ಆಲೋಚನಗಳಿಗೆ ನಿಮ್ಮ ಮನಸ್ಸನ್ನು ಕೊಡಿ, ತಾಳ್ಮೆಯಿಂದ ಹೊಸ ಯೋಚನೆಗಳಿಗೆ ಆಸ್ಪದ ನೀಡಿ ಬೆಳಿಸಿ ಕೊಳ್ಳಿರಿ, ಸ್ವಾಭಿಮಾನದಿಂದ ಕೆಲಸ ಮಾಡಿ ಎಂದು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಸರಿತಾ ಕೆ.ಎಸ್. ರವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಮಾಡುವ ಕೆಲಸದಲ್ಲಿ ರಿಸ್ಕ್ ತೆಗೆದುಕೊಳ್ಳದೇ ಇರುವುದೇ ದೊಡ್ಡ ರಿಸ್ಕ್, ಸಮಯವನ್ನು ಸರಿಯಾಗಿ ಬಳಸಿಕೊಂಡು ವಿಭಿನ್ನವಾಗಿ ಕೆಲಸ ಮಾಡಿ, ಮಾನವೀಯ ಮೌಲ್ಯಯುತ ಗುಣವನ್ನು ರೂಢಿಸಿಕೊಂಡು ತರಬೇತಿ ಅವಧಿಯಲ್ಲಿ ಕಲಿತ ಜ್ಞಾನ ಮತ್ತು ಕೌಶಲ್ಯವನ್ನು ಜೀವನದಲ್ಲಿ ಅಳವಡಿಸಿ ಯಶಸ್ವಿ ಸ್ವ ಉದ್ಯೋಗಿಗಳಾಗಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶ್ರೀ ಡಿ.ಟಿ. ವೇಂಕಟೇಶ್, ಸಮಾಲೋಚಕರು, ಆರ್ಥಿಕ ಸಾಕ್ಷರ ಕೇಂದ್ರ, ಮೈಸೂರು ಮತ್ತು ಶ್ರೀ ಗುರುರಾಜ್, ಸಂಪನ್ಮೂಲ ವ್ಯಕ್ತಿಗಳು, ಮಂಗಳೂರು ಇವರುಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ಅತಿಥಿಗಳನ್ನು ಸಂಸ್ಥೆಯ ಉಪನ್ಯಾಸಕರಾದ ಶ್ರೀಯುತ ಪಾಲ್‌ರಾಜ್ ಆರ್. ರವರು ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು ಮತ್ತು ಕಾರ್ಯಕ್ರಮವನ್ನು ನಿರೂಪಿಸಿದರು. ಸಂಸ್ಥೆಯ ಉಪನ್ಯಾಸಕರಾದ ಶ್ರೀಮತಿ ಲತಾಮಣಿ ಯವರು ವಂದನಾರ್ಪಣೆ ಮಾಡಿದರು. ಒಟ್ಟು ಕಾರ್ಯಕ್ರಮದಲ್ಲಿ ೭೫ ಜನ ಶಿಬಿರಾರ್ಥಿಗಳು ಸೇರಿದಂತೆ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು. ಧನ್ಯವಾದಗಳೊಂದಿಗೆ,