Valedictory programme of Sheep & Goat Rearing Training
ಮೈಸೂರು : ರುಡ್‌ಸೆಟ್ ಸಂಸ್ಥೆಯು ಎನ್.ಆರ್.ಎಲ್.ಎಂ. ಜಿಲ್ಲಾ ಪಂಚಾಯತ್ ಮೈಸೂರು ಇವರ ಪ್ರಾಯೋಜಕತ್ವದಲ್ಲಿ ಉದ್ಯಮಶೀಲತಾಭಿವೃದ್ಧಿ – ಆಡು ಮತ್ತು ಕುರಿ ಸಾಕಾಣಿಕೆ ತರಬೇತಿ ಕಾರ್ಯಕ್ರಮವನ್ನು ೧೦ ದಿನಗಳÀ ಕಾಲಾವಧಿಯವರೆಗೆ ಆಯೋಜಿಸಲಾಗಿದ್ದು, ಈ ತರಬೇತಿ ಕಾರ್ಯಗಾರದ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ದಿನಾಂಕ:೧೦.೦೮.೨೦೨೪ ರ ಸಂಜೆ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿತ್ತು, ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ನಾಗರಾಜು, ಉಪ ನಿರ್ದೇಶಕರು, ಪಶು ಸಂಗೋಪನ ಇಲಾಖೆ, ಮೈಸೂರು ಇವರು ಭಾಗವಹಿಸಿದ್ದರು.
ಇವರು ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು ಹಾಗೂ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಇಂದಿನ ಜಾಗತೀಕರಣ ಜಗತ್ತಿನಲ್ಲಿ ದೇಶ ಅಭಿವೃದ್ಧಿ ಪಥದತ್ತ ಸಾಗಬೇಕಾದರೆ ದೇಶದಲ್ಲಿನ ಗ್ರಾಮೀಣ ಪ್ರದೇಶ ಸಾಮಾಜಿಕ ಬದಲಾವಣೆಗಾಗಿ, ಆರ್ಥಿಕ ಏಳಿಗೆಯಾಗುವುದರಿಂದ ಅಸಮತೋಲನ ನಿವಾರಣೆ ಯಾಗುವುದು ಬಹಳ ಮುಖ್ಯ, ಗ್ರಾಮಗಳ ಉದ್ದಾರವೇ ದೇಶದ ಉದ್ದಾರ ಎಂದು ಅಭಿಪ್ರಾಯಪಟ್ಟರು. ಗ್ರಾಮೀಣ ಜನತೆ ಆದಾಯ ತರುವಂತಹ ಆರ್ಥಿಕ ಚಟುವಟಿಕೆಗಳನ್ನು / ಉಪಕಸುಬುಗಳನ್ನು ಗುಂಪಿನ ಮೂಲಕ ಹಮ್ಮಿಕೊಳ್ಳುವುದರಿಂದ ಉತ್ತಮ ಅಭಿವೃದ್ಧಿ ಸಾಧ್ಯವಾಗುತ್ತದೆ. ಗ್ರಾಮೀಣ ಜನರ ಸಾಮಾನ್ಯ ಕಸುಬು ಆಡು ಮತ್ತು ಕುರಿ ಸಾಕಾಣಿಕೆಯಾಗಿದ್ದು, ಸಂಪ್ರದಾಯಿಕ ಕಸುಬನ್ನು ವ್ಶೆಜ್ಞಾನಿಕವಾಗಿ ಮಾರ್ಪಡಿಸುವುದರಿಂದ ಕುಟುಂಬದ ಆದಾಯ ಹೆಚ್ಚುತ್ತದೆ, ಜೊತೆಗೆ ದುಡಿಯುವ ಕೈಗಳಿಗೆ ಕೆಲಸ ದೊರೆಯುತ್ತದೆ. ಎನ್.ಎಲ್.ಎಂ. ಯೋಜನೆಯ ಸೌಲಭ್ಯಗಳನ್ನು ವಿವರವಾಗಿ ತಿಳಿಸಿದರು, ಅಂತೆಯೇ ಅಮೃತ ಸ್ವಾಬಿಮಾನಿ ಕುರಿಗಾಹಿ ಯೋಜನೆ, ವಿಶೇಷವಾಗಿ ಮಹಿಳೆಯರಿಗೆ ದೊರೆಯುವ ಬಡ್ಡಿ ಸಹಾಯಧನದ ಯೋಜನೆ ಗಳ ಕುರಿತಂತೆ ಪಶುಸಂಗೋಪನಾ ಇಲಾಖೆಯಿಂದ ದೊರೆಯುವ ಹಲವಾರು ಯೋಜನೆಗಳನ್ನು ಯುವಕರು ಬಳಸಿಕೊಂಡು ಯಶಸ್ವಿಯಾಗಬೇಕೆಂದು ತಿಳಿ ಹೇಳಿದರು. ಕೃಷಿ ಚಟುವಟಿಕೆ, ಕುರಿ ಮತ್ತು ಆಡು ಸಾಕಾಣಿಕೆ ಮಾಡುವವರು ಮೂಡನಂಬಿಕೆ, ಮೌಡ್ಯಯನ್ನು ತೊರೆದು ವೈಜ್ಞಾನಿಕವಾಗಿ ಕಸುಬು ಮಾಡಿಇದನ್ನ ಪ್ರೇರೆಪಿಸುವ ಉದ್ದೇಶದಿಂದ ಪೂರಕವಾಗಿ ನಮ್ಮ ರುಡ್‌ಸೆಟ್ ಸಂಸ್ಥೆಯಲ್ಲಿ ಅಲ್ಪಾವಧಿಯ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ. ನೆಮ್ಮದಿಯ ಬದುಕಿಗೆ ದುಡಿಮೆ ಕಾರಣ, ಆದಾಯ ತರುವಂತಹ ಕೃಷಿ ಉತ್ಪಾದನೆಯ ಚಟುವಟಿಕೆಗಳಲ್ಲಿ ತೊಡಗಿ ಸಮುದಾಯದ ಶಕ್ತಿ ಸಂಪನ್ಮೂಲಗಳನ್ನು ಬಳಸಿಕೊಂಡು ಕುಟುಂಬದ ಏಳಿಗೆಯೊಂದಿಗೆ ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ನಿರತರಾಗಿರಿ ಎಂದು ಕಿವಿ ಮಾತು ಹೇಳಿದರು. ಆದ್ದರಿಂದ ತರಬೇತಿಯಲ್ಲಿ ತಿಳಿದ ವಿಷಯನ್ನು ಬದುಕಿನಲ್ಲಿ ರೂಢಿಗತಗೊಳಿಸಿಕೊಳ್ಳಿರಿ ಎಂದು ಆಶಿಸುತ್ತಾ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶ್ರೀ ಆರ್.ಕೆ. ಬಾಲಚಂದ್ರ, ಎಲ್.ಡಿ.ಎಂ.(ನಿವೃತ್ತ), ಮಡಕೇರಿ, ಶ್ರೀ ಎಂ. ಲಿಂಗಣ್ಣ, ಹಿರಿಯ ಬ್ಯಾಂಕರ್ (ನಿವೃತ್ತ), ಪಂಶುಸAಗೋಪನಾ ಇಲಾಖೆಯ ಡಾ. ಶಿವಲಿಂಗಯ್ಯ, ಡಾ. ಶಿವಕುಮಾರ್ (ನಿವೃತ್ತ ಉಪನಿರ್ದೇಶಕರು) , ಡಾ. ಮಂಜುನಾಥ್ (ನಿವೃತ್ತ), ಡಾ. ತಿಮ್ಮಯ್ಯ, ಡಾ.ಶಶಿಧರ್, ಡಾ. ಅಶೋಕ್ ಕುಮಾರ್, ಡಾ. ಸಂತೋಷ್ ಓಡೆಯರ್, ಡಾ. ವರಲಕ್ಷಿö್ಮÃ ಮತ್ತು ಡಾ.ಸವಿತ ರವರುಗಳು ಉಪಸ್ಥಿತರಿದ್ದರು ಮತ್ತು ಅವರುಗಳ ಸಂಸ್ಥೆಯ ವತಿಯಿಂದ ಗೌರವ ಅಭಿನಂದನೆಗಳನ್ನು ಸಮರ್ಪಿಸಲಾಯಿತು.
ಶ್ರೀಮತಿ ಸರಿತಾ ಕೆ.ಎಸ್. ನಿರ್ದೇಶಕರು, ರುಡ್‌ಸೆಟ್ ಸಂಸ್ಥೆ, ಮೈಸೂರು ಇವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಕೃಷಿ ದೇಶದ ಬೆನ್ನೆಲುಬು, ಕೃಷಿ ಎಂದರೆ ಭೂತಕಾಲದ ಅನುಭವ ಸಂಸ್ಕಾರದ ಜೊತೆಗೆವರ್ತಮಾನ ದ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಮತ್ತು ಭವಿಷತ್ತಿನ ಉದ್ದಿಮೆಗಳ ಭರವಸೆಯನ್ನು ಮೂಡಿಸುವಂತಾಗಬೇಕು ಎಂದು ಸಲಹೆ ನೀಡಿದರು.
ಸಂಸ್ಥೆಯ ಉಪನ್ಯಾಸಕರಾದ ಶ್ರೀ ಆರ್. ಪಾಲ್‌ರಾಜ್ ರವರು ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಪರಿಚಯಿಸುತ್ತಾ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪನ್ಯಾಸಕರಾದ ಶ್ರೀಮತಿ ಲತಾಮಣಿಯವರು ವಂದನಾರ್ಪಣೆ ಮಾಡಿದರು.
ಒಟ್ಟು ಕಾರ್ಯಕ್ರಮದಲ್ಲಿ ೭೫ ಜನ ಶಿಬಿರಾರ್ಥಿಗಳು (ಆಡು ಮತ್ತು ಕುರಿ ಸಾಕಾಣಿಕೆ, ಕಂಪ್ಯೂಟರ್ ಹಾರ್ಡ್ವೇರ್ ತರಬೇತಿ) ಸೇರಿದಂತೆ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.