Rudset Institute Logo

“ Instead of writing someone else’s account through wage employment after three to five years of collegiate education, it is more meaningful to write one’s own account by embarking upon some self-employment "

- Dr. D. Veerendra Heggade

President, RUDSET Institutes
Veerendra Hegde
Call Us Now: +91 90680 00528

Valedictory programme of Women’s Tailoring

ಮೈಸೂರು : ರುಡ್‌ಸೆಟ್ ಸಂಸ್ಥೆಯ ವತಿಯಿಂದ ರಾಷ್ಟಿçÃಯ ಗ್ರಾಮೀಣ ಜೀವನೋಪಾಯ ಅಭಿಯಾನ, ಜಿಲ್ಲಾ ಪಂಚಾಯತ್, ಮೈಸೂರು ಇವರ ಪ್ರಾಯೋಜಕತ್ವದಲ್ಲಿ ೩೦ ದಿನಗಳ ಮಹಿಳೆಯರ ಟೈಲರಿಂಗ್ ತರಬೇತಿಯನ್ನು ಹಮ್ಮಿಕೊಂಡಿದ್ದು, ಈ ತರಬೇತಿಯ ಸಮಾರೋಪ ಸಮಾರಂಭವನ್ನು ದಿನಾಂಕ:೦೩.೧೨.೨೦೨೪ ರಂದು ಮಂಗಳವಾರ ಸಂಜೆ ಸಂಸ್ಥೆಯ ಆವರಣದಲ್ಲಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಪ್ರಮೋದ್ ನವಣಿ, ಪ್ರಾದೇಶಿಕ ಪ್ರಬಂಧಕರು, ಕರ್ನಾಟಕ ಗ್ರಾಮೀಣ ಬ್ಯಾಂಕ್, ಪ್ರಾದೇಶಿಕ ಕಚೇರಿ, ಮೈಸೂರು ಇವರು ಉಪಸ್ಥಿತರಿದ್ದರು.

ಇವರು ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿದರು ಮತ್ತು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಸ್ವಾವಲಂಬಿ ಬದುಕಿನ ಛಾಪನ್ನು ಮೂಡಿಸುತ್ತಿದ್ದಾರೆ. ಅಂತಹ ಕ್ಷೇತ್ರಗಳಲ್ಲಿ ಮುಖ್ಯವಾಗಿ ಟೈಲರಿಂಗ್ ಉದ್ಯಮವೂ ಒಂದು. ಇಂದು ಮಹಿಳೆ ತಮ್ಮ ಕುಟುಂಬದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಲು ಆಕೆಯ ಕೈಯಲ್ಲಿ ಒಂದು ಕಸುಬು ಅಗತ್ಯ, ಅದರಲ್ಲಿ ಆಕೆಯ ಕೈಗೆ ಬಹಳ ಬೇಗ ಎಟಕುವಂತಹದ್ದು ಟೈಲರಿಂಗ್ ಕೆಲಸ. ಈ ಟೈಲರಿಂಗ್ ಉದ್ಯೋಗ ಒಂದು ಸಾರ್ವತ್ರಿಕ ಉದ್ಯಮ ಮತ್ತು ಎಲ್ಲರಿಗೂ ಅವಶ್ಯಕವಿರುವ ಉತ್ಪನ್ನವನ್ನು ಒದಗಿಸುವ ಉದ್ಯಮ, ಮನೆಯಲ್ಲಿ ಒಂದು ಚಿಕ್ಕದಾಗಿ ಉದ್ಯಮವನ್ನು ಆರಂಭ ಮಾಡಿದರೂ ಮನೆಯನ್ನು ನಡೆಸುವಷ್ಟು ಆದಾಯ ಗಳಿಸಬಹುದು. ತರಬೇತಿ ಕಲಿಕೆಗಾಗಿ ಮನೆಯಿಂದ ಆಚೆ ಬಂದು ಸ್ವಾವಲಂಬನೆ ಹಾದಿಯ ಒಂದು ಹೆಜ್ಜೆ ದಾಟಿದ್ದೀರಿ, ಇನ್ನುಳಿದ ಹಂತಗಳನ್ನು ನಿಬಾಯಿಸಲು ಕೌಶಲ್ಯದ ನಿಪುಣತೆ ಅಗತ್ಯ ಎಂದು ಶಿಬಿರಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಮಹಿಳೆಯರು ಕೇವಲ ಕುಟುಂಬಕ್ಕೆ ಸೀಮಿತವಾಗಿರದೆ ತಮ್ಮ ಕೌಶಲ್ಯಗಳನ್ನು ಉಪಯೋಗಿಸಿ, ಸ್ವಉದ್ಯೋಗವನ್ನು ಮಾಡಿ ತಮ್ಮ ಕುಟುಂಬದ ಆದಾಯವನ್ನು ಹೆಚ್ಚಿಸಲು ಗಮನ ಹರಿಸಬೇಕು. ಯಾರೊಬ್ಬರ ಮೇಲೂ ಅವಲಂಬಿಗಳಾಗದೆ, ಮಹಿಳೆಯರು ಸ್ವಾವಲಂಬಿಗಳಾಗಬೇಕು ಎಂದು ಶಿಬಿರಾರ್ಥಿಗಳಿಗೆ ಶುಭಾಷಯ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀಮತಿ ಸರಿತಾ, ನಿರ್ದೇಶಕರು ರುಡ್‌ಸೆಟ್ ಸಂಸ್ಥೆ, ಮೈಸೂರು ರವರು ಮಾತನಾಡುತ್ತಾ ವಸ್ತç ವಿನ್ಯಾಸದ ಉದ್ಯಮ ಇಂದು ವಿನೂತನವಾಗಿ ಹೊಸತನಕ್ಕೆ ತೆರೆದುಕೊಂಡಿದೆ. ಪ್ರಸ್ತುತೆಗೆ ತಕ್ಕಂತೆ ಕೌಶಲ್ಯಗಳನ್ನು ಉನ್ನತೀಕರಿಸಿಕೊಂಡು ಆದಾಯ ಮತ್ತು ಬೇಡಿಕೆಯನ್ನು ಉತ್ತಮಗೊಳಿಸಿಕೊಳ್ಳಿರಿ. ಟೈಲರಿಂಗ್ ವೃತ್ತಿ ತುಂಬಾ ಪ್ರಶಸ್ತ ಉತ್ತಮವಾದುದು, ಅದನ್ನು ಆರಿಸಿಕೊಂಡು ಕಲಿಯಲು ಬಂದಿರುವ ಶಿಬಿರಾರ್ಥಿಗಳಿಗೆ ಶುಭವಾಗಲಿ ಎಂದು ಹರಸಿದರು.
ಸಂಸ್ಥೆಯ ಉಪನ್ಯಾಸಕರಾದ ಶ್ರೀ ಪಾಲ್‌ರಾಜ್ ರವರು ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸ್ವಾಗತಿಸಿದರು. ಉಪನ್ಯಾಕರಾದ ಶ್ರೀಮತಿ ಲತಾಮಣಿ ಇವರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ೨೯ ಜನ ಶಿಬಿರಾರ್ಥಿಗಳು ಹಾಜರಿದ್ದರು.