Rudset Institute Logo

“ Instead of writing someone else’s account through wage employment after three to five years of collegiate education, it is more meaningful to write one’s own account by embarking upon some self-employment "

- Dr. D. Veerendra Heggade

President, RUDSET Institutes
Veerendra Hegde
Call Us Now: +91 90680 00528

Sri Pankaj Yadav, IAS, Joint Secretary of MoRD, Govt. of India visited to RUDSETI Mysuru

ಮೈಸೂರು : ರುಡ್‌ಸೆಟ್ ಸಂಸ್ಥೆಯು ಎನ್‌ಆರ್‌ಎಲ್‌ಎಂ ಯೋಜನೆಯಡಿಯಲ್ಲಿ ೦೬ ದಿನಗಳ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ಆರ್ಥಿಕ ಸಾಕ್ಷರತಾ ತರಬೇತಿಯನ್ನು ದಿನಾಂಕ:೨೦.೦೧.೨೦೨೫ ರಿಂದ ೨೫.೦೧.೨೦೨೫ ರವರೆಗೆ ನಡೆಸಲಾಗಿದ್ದು. ಮಹಿಳಾ ಸಬಲೀಕರಣಕ್ಕಾಗಿ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಎನ್‌ಆರ್‌ಎಲ್‌ಎಂ ಯೋಜನೆಯ ಮೂಲಕ ಹಮ್ಮಿಕೊಳ್ಳುತ್ತಲಿದೆ, ಅದರಲ್ಲಿ ಬಹಳ ಮಹತ್ತರ ಉದ್ದೇಶದ ಆರ್ಥಿಕ ಸಾಕ್ಷರತೆಯನ್ನು ಗ್ರಾಮೀಣ ಮಹಿಳೆಯರಿಗೆ ನೀಡಬೇಕೆಂದು ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಿ ಅವರುಗಳ ಸಾಮರ್ಥ್ಯ ಬಲವರ್ಧನೆಗಾಗಿ ತರಬೇತಿಯನ್ನು ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು. ಸದರಿ ತರಬೇತಿಯ ಸಮಾರೋಪ ಸಮಾರಂಭವನ್ನು ದಿನಾಂಕ ೨೫.೦೧.೨೦೨೫ ರಂದು ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಯುತ ಪಂಕಜ್ ಯಾದವ್ ಐಎಎಸ್., ಮಾನ್ಯ ಜಂಟಿ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಸಚಿವಾಲಯ, ಭಾರತ ಸರ್ಕಾರ ಇವರು ಭಾಗವಹಿಸಿದ್ದರು.

ಇವರು ತರಬೇತಿಯನ್ನು ಯಶಸ್ವಿಯಾಗಿ ಪಡೆದ ಶಿಭಿರಾರ್ಥಿಗಳಿಗೆ ಪ್ರಮಾಣಪತ್ರ ಮತ್ತು ಟೂಲ್ ಕಿಟ್ ವಿತರಿಸಿ ಶುಭ ಕೋರಿದರು.
ಮತ್ತು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಎನ್‌ಆರ್‌ಎಲ್‌ಎಂ ವಿಭಾಗ ವಿನೂತನವಾದ ಕಾರ್ಯಕ್ರಮ ಇದ್ದಾಗಿದ್ದು, ಆರ್ಥಿಕ ಸಾಕ್ಷರತೆ ಪ್ರತಿಯೊಬ್ಬರಿಗೂ ಬಹಳ ಅಗತ್ಯವಾದ ಅಂಶವಾಗಿದೆ. ಪ್ರತಿಯೊಬ್ಬರೂ ತಮ್ಮಗಳ ವ್ಯವಹಾರ ಮತ್ತು ವೈಯಕ್ತಿಕ ಬದುಕಿನಲ್ಲಿ ಆರ್ಥಿಕ ಸುಸ್ಥಿರತೆಯೊಂದಿಗೆ ಅಭಿವೃದ್ಧಿಯನ್ನು ಸಾಧಿಸಲು ಬ್ಯಾಂಕಿAಗ್ ವ್ಯವಹಾರಗಳ ಕುರಿತಾದ ತಿಳುವಳಿಕೆ, ಡಿಜಿಟಲ್ ಪೇಮೆಂಟ್ ಸಿಸ್ಟಮ್, ಉಳಿತಾಯದ ಕುರಿತಾದ ಜಾಗೃತಿ, ಖರ್ಚುವೆಚ್ಚಗಳ ನಿರ್ವಹಣೆ ಕುರಿತು ಅರಿವು ತುಂಬಾ ಅವಶ್ಯ ಎಂದು ಅಭಿಪ್ರಾಯಪಟ್ಟರು. ಇತ್ತಿಚೆಗೆ ನೆಡೆಯುತ್ತಿರುವ ಆನ್‌ಲೈನ್ ವಂಚನೆಗಳಿAದ ಜನಸಾಮಾನ್ಯರು ತುಂಬಾ ತೊಂದರೆಗೆ ಒಳಗಾಗುತ್ತಿದ್ದಾರೆ. ಆನ್‌ಲೈನ್ ವಂಚನೆಗಳ ಕುರಿತಾದ ಎಚ್ಚರಿಕೆ, ತಿಳುವಳಿಕೆ ಮತ್ತು ಪಾಲಿಸಬೇಕಾದ ಕಾರ್ಯತಂತ್ರಗಳನ್ನು ಪ್ರತಿಯೊಬ್ಬರೂ ಅರಿಯುವಂತೆ ಮಾಡುವ ಜವಬ್ದಾರಿ ನಮ್ಮೆಲ್ಲರದು ಎಂದು ಶಿಬಿರಾರ್ಥಿಗಳಿಗೆ ಅವರ ಕಾರ್ಯಚಟುವಟಿಕೆಗಳ ತಿಳುವಳಿಕೆ ಮೂಡಿಸಿದರು. ಈ ವಿಚಾರ ಕುರಿತಂತೆ ಕೇಂದ್ರ ಸರ್ಕಾರ ಹಲವಾರು ಕಾರ್ಯತಂತ್ರಗಳನ್ನು ರೂಪಸಿದೆ. ಮೇಲ್‌ಸ್ತರದಿಂದ ಹಿಡಿದು ಗ್ರಾಮೀಣ ಮಟ್ಟದ ಸಾಮಾನ್ಯರವರೆಗೂ ಪ್ರತಿಯೊಬ್ಬರೂ ಆರ್ಥಿಕ ಸಾಕ್ಷರತೆಯ ಅರಿವನ್ನು ಬೆಳೆಸಿಕೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸುವಂತೆ ಸಮುದಾಯ ಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಿರಿ ಎಂದು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶ್ರೀ ಕೆ.ಬಿ. ಪ್ರಭುಸ್ವಾಮಿ, ಮುಖ್ಯ ಯೋಜನಾಧಿಕಾರಿಗಳು, ಜಿಲ್ಲಾ ಪಂಚಾಯತ್, ಮೈಸೂರು, ಶ್ರೀ ಮುರುಗೇಶನ್, ರಾಷ್ಟಿçÃಯ ನಿರ್ದೇಶಕರು – ಆರ್‌ಸೆಟಿ ಸಂಸ್ಥೆಗಳು, ಓಂಅಇಖ, ಬೆಂಗಳೂರು, ಶ್ರೀ ಆರ್.ಆರ್. ಸಿಂಗ್, ರಾಷ್ಟಿçÃಯ ಮೌಲ್ಯಮಾಪನ ನಿಯಂತ್ರಣಾಧಿಕಾರಿಗಳು, ರಾಷ್ಟಿçÃಯ ರುಡ್‌ಸೆಟ್ ಆಕಾಡೆಮಿ, ಬೆಂಗಳೂರು.
ಶ್ರೀಮತಿ ಆಶಾ ಎ.ಆರ್., ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು, ಎನ್‌ಆರ್‌ಎಲ್‌ಎಂ, ಮೈಸೂರು, ಶ್ರೀ ಬಸವರಾಜು, ಜಿಲ್ಲಾ ವ್ಯವಸ್ಥಾಪಕರು, ಎನ್‌ಆರ್‌ಎಲ್‌ಎಂ, ಮೈಸೂರು ಇವರುಗಳು ಉಪಸ್ಥಿತರಿದ್ದರು.
ಶ್ರೀಮತಿ ಸರಿತಾ ಕೆ.ಎಸ್. ನಿರ್ದೇಶಕರು, ರುಡ್‌ಸೆಟ್ ಸಂಸ್ಥೆ, ಮೈಸೂರು ಇವರು ಕಾರ್ಯಕ್ರಮದಲ್ಲಿ ಆಗಮಿಸಿದ ಎಲ್ಲರನ್ನ ಆತ್ಮೀಯವಾಗಿ ಸ್ವಾಗತಿಸಿದರು.
ಸಂಸ್ಥೆಯ ಉಪನ್ಯಾಸಕರಾದ ಶ್ರೀಮತಿ ಲತಾಮಣಿ ಯವರು ಕಾರ್ಯಕ್ರಮವನ್ನು ನಿರೂಪಿಸಿದರು ಕಾರ್ಯಕ್ರಮದ ಕೊನೆಯಲ್ಲಿ ಸಂಸ್ಥೆಯ ಉಪನ್ಯಾಸಕರಾದ ಶ್ರೀ ಪಾಲ್‌ರಾಜ್ ರವರು ವಂದನಾರ್ಪಣೆ ಮಾಡಿದರು.
ಒಟ್ಟು ಕಾರ್ಯಕ್ರಮದಲ್ಲಿ ೭೦ ಜನ ಶಿಬಿರಾರ್ಥಿಗಳು ಸೇರಿದಂತೆ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.