Rudset Institute Logo

“ Instead of writing someone else’s account through wage employment after three to five years of collegiate education, it is more meaningful to write one’s own account by embarking upon some self-employment "

- Dr. D. Veerendra Heggade

President, RUDSET Institutes
Veerendra Hegde
Call Us Now: +91 90680 00528

“ಸಾಧನೆಯ ಮೂಲಕ ಸಮಾಜದಲ್ಲಿ ನಿಮ್ಮನ್ನು ಗುರುತಿಸಿಕೊಳ್ಳಿ”

ಬದುಕಿನಲ್ಲಿ ಸಿಕ್ಕಿದ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳಿ, ಫ್ಯಾಷನ್‌ ಯುಗದಲ್ಲಿ ಹೊಸತನಕ್ಕೆ ಉತ್ತಮ ಅವಕಾಶ ಇದೆ, ನಿಮ್ಮ ಕೆಲಸದಲ್ಲಿ ಹೊಸತನಕ್ಕೆ ಹೆಚ್ಚು ಆದ್ಯತೆ ಇರಲಿ, ಗ್ರಾಹಕರು ಅಪೇಕ್ಷೆಗೆ ಅನುಗುಣವಾಗಿ ಕೆಲಸ ಮಾಡಿ ಕೊಡುವಂತಹ ಪ್ರಯತ್ನ ಮಾಡಿ, ಸಾದನೆಯ ಮೂಲಕ ನಿಮ್ಮನ್ನು ಗುರುತಿಸಿಕೊಳ್ಳಿ, ರುಡ್‌ಸೆಟ್‌ ಸಂಸ್ಥೆಯು ಏನೂ ಪ್ರತಿಫಲ ಅಪೇಕ್ಷೆ ಇಲ್ಲದೆ, ಯುವ ಯುವ ಜನತೆಯು ಆರ್ಥಿಕ ಸಬಲರಾಗುವ ಉದ್ದೇಶದಿಂದ ಪೂಜ್ಯ‌ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಸ್ಥಾಪಿಸಿದ ಈ ಸಂಸ್ಥೆಯಲ್ಲಿ ಪಡೆದ ಈ ತರಬೇತಿಯನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳಿ ಎಂದು ಧೀಮತಿ ಮಹಿಳಾ ಸಮಾಜದ ಸ್ಥಾಪಕ ಅಧ್ಯಕ್ಷೆಯಾದ ಶ್ರೀಮತಿ ಸೋನಿಯಾವರ್ಮ ರವರು ಅಭಿಪ್ರಾಯ ಪಟ್ಟರು. ಅವರು ಉಜಿರೆಯ ರುಡ್‌ಸೆಟ್‌ ಸಂಸ್ಥೆಯಲ್ಲಿ ನಡೆದ ಎಂಬ್ರಾಯ್ಡರಿ ಮತ್ತು ಫ್ಯಾಬ್ರಿಕ್‌ ಪೈಂಟಿಂಗ್‌ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಶಿಭಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಆಧುನಿಕ ಯುಗದಲ್ಲಿ ಎಂಬ್ರಾಯ್ಡರಿ ಹೆಚ್ಚು ಬೇಡಿಕೆ ಇರುವಂತಹ ಉದ್ಯೋಗ ಕ್ಷೇತ್ರವಾಗಿದ್ದು, ಮಹಿಳೆಯರು ಮನೆಯಲ್ಲೇ ಸ್ವ ಉದ್ಯೋಗ ಪ್ರಾರಂಬಿಸಿ, ಉತ್ತಮ ಆದಾಯ ಗಳಿಸಲು ಅವಕಾಶ ಇದೆ. ಈ ಕಾರ್ಯಕ್ರಮದಲ್ಲಿ ರುಡ್‌ಸೆಟ್‌ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಗಿರಿಧರ್‌ ಕಲ್ಲಾಪುರ ರವರು ಅದ್ಯಕ್ಷ ಸ್ಥಾನ ವಹಿಸಿದ್ದರು, ಸಂಸ್ಥೆಯ ನಿರ್ದೇಶಕರಾದ ಶ್ರೀ ಎಮ್.‌ ಸುರೇಶ್‌ ರವರು ಅತಿಥಿಗಳನ್ನು ಸ್ವಾಗತಿಸಿ ತರಬೇತಿಯ ಹಿನ್ನೋಟವನ್ನು ನೀಡಿದರು. ಹಿರಿಯ ಉಪನ್ಯಾಸಕರಾದ ಶ್ರೀಮತಿ ಅನಸೂಯರವರು ಕಾರ್ಯಕ್ರಮ ನಿರ್ವಹಿಸಿದರೆ, ಹಿರಿಯ ಉಪನ್ಯಾಸಕರಾದ ಶ್ರೀ ಅಬ್ರಹಾಂ ಜೇಮ್ಸ್‌ ಧನ್ಯವಾದವಿತ್ತರು. ಕೆಲವು ಶಿಭಿರಾರ್ಥಿಗಳು ಅನಿಸಿಕೆಯನ್ನು ವ್ಯಕ್ತಪಡಿಸಿದರು. ೩೫ ಜನ ಶಿಭಿರಾರ್ಥಿಗಳು ೩೦ ದಿನಗಳ ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.