ಬ್ಯೂಟಿಪಾರ್ಲರ ತರಬೇತಿಯ ಸಮಾರೋಪ ಸಮಾರಂಭ
ಳ : ರುಡ್‌ಸೆಟ್ ಸಂಸ್ಥೆ, ವಿಜಯಪುರ ದಿನಾಂಕ : ೨೪.೦೬.೨೦೨೩
ಉದ್ಯೋಗದ ಆರಂಭದಲ್ಲಿ ಗುರಿ ಸಣ್ಣದಾಗಿರಲಿ ಹಾಗೂ ಉತ್ಸಾಹ, ಆತ್ಮವಿಶ್ವಾಸ ಇಟ್ಟುಕೊಂಡು ಬ್ಯೂಟಿ ಪಾರ್ಲರ್ ಉದ್ಯೋಗದಲ್ಲಿ ಮುನ್ನೆಡೆಯಿರಿ ಎಂದು ವಿಜಯಪುರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಪ್ರಾದೇಶಿಕ ಮಹಾಪ್ರಬಂಧಕರಾದ ರಾಜೇಂದ್ರ ಮುಗಳಿಹಾಳ ಅವರು ಬ್ಯೂಟಿ ಪಾರ್ಲರ ಶಿಬಿರಾರ್ಥಿಗಳಿಗೆ ಕರೆ ಕೊಟ್ಟರು. ಅವರು ಇಂದು ರುಡ್‌ಸೆಟ್ ಸಂಸ್ಥೆ, ವಿಜಯಪುರದಲ್ಲಿ ಜರುಗಿದ ಬ್ಯೂಟಿ ಪಾರ್ಲರ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ ಮಾತನಾಡುತ್ತಾ, ಬ್ಯೂಟಿ ಪಾರ್ಲರ್ ಉದ್ಯಮಕ್ಕೆ ಹೇರಳ ಅವಕಾಶಗಳಿದ್ದು, ಈಗಿನ ಗ್ರಾಹಕರಿಗೆ ಸೌಂದರ್ಯ ಪ್ರಜ್ಞೆ ಹೆಚ್ಚಿದ್ದು ಅದರ ಸದವಕಾಶಗಳನ್ನು ಬಳಸಿಕೊಂಡು ಉದ್ಯಮದಲ್ಲಿ ಮುನ್ನೆಡೆಯಿರಿ ಎಂದು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ಸಹ ತಮ್ಮ ಉದ್ಯೋಗಕ್ಕೆ ಆರ್ಥಿಕ ನೇರವು ನೀಡುತ್ತದೆ ಅದರ ಉಪಯೋಗವನ್ನು ಬಳಸಿಕೊಂಡು ಯಶಸ್ವಿಯಾಗಿ ಎಂದು ಕರೆ ನೀಡಿದರು.
ವಿಜಯಪುರದ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರಾದ ಮುತ್ತಣ್ಣ ಎಮ್ ಧನಗರ್ ಅವರು ೩೦ ದಿನಗಳ ಕಾಲ ಸಂಸ್ಥೆ ಗುಣಮಟ್ಟದ ತರಬೇತಿ ನೀಡಿದ್ದು ಎಲ್ಲರೂ ಉದ್ಯಮಶೀಲರಾಗಿ ಹೊರಹೊಮ್ಮಿ ಎಂದು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕರುಗಳಾದ ಜಗದೀಶ ಸಿ. ಪೂಜಾರ, ಮಲ್ಲಿಕಾರ್ಜುನ ಸಿ. ಹತ್ತಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬ್ಯೂಟಿ ಪಾರ್ಲರ್ ಕೌಶಲ್ಯವನ್ನು ಅತಿಥಿ ಉಪನ್ಯಾಸಕರಾದ ಸಂಧ್ಯಾ ಸುರೇಶ ಅವರು ನಡೆಸಿಕೊಟ್ಟದ್ದು ಈ ತರಬೇತಿಯಲ್ಲಿ ವಿಜಯಪುರ ಮತ್ತು ಬಾಗಲಕೋಟ ಜಿಲ್ಲೆಯ ೨೫ ಮಹಿಳಾ ಶಿಬಿರಾರ್ಥಿಗಳು ಭಾಗವಹಿಸಿದ್ದರು.